SKSSF ದ. ಕ ಜಿಲ್ಲಾ ಸಮಿತಿಯಿಂದ ಅಬ್ದುಲ್ ರಹಿಮಾನ್ ಕೊಳತ್ತಮಜಲು ಹತ್ಯೆಯನ್ನು ಖಂಡಿಸಿ ಎಂಟು ಬೇಡಿಕೆಯೊಂದಿಗೆ ನೂತನ ಕಮಿಷನರ್ ಗೆ ಜಿಲ್ಲಾ ಅಧ್ಯಕ್ಷರಾದ ಸಯ್ಯದ್ ಅಮೀರ್ ತಂಙಳ್ ಕಿನ್ಯ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ನಿಯೋಗದಲ್ಲಿ SKSSF ವಿಖಾಯ ಕೇಂದ್ರ ಸಮಿತಿ ಸದಸ್ಯರಾದ ಮುಸ್ತಫ ಕಟ್ಟದಪಡ್ಪು, ವಿಖಾಯ ಕರ್ನಾಟಕ ರಾಜ್ಯ ಚಯರ್ಮ್ಯಾನ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಸಾರ್ ಅಹ್ಮದ್ ಬೆಂಗ್ರೆ ,ವರ್ಕಿಂಗ್ ಕಾರ್ಯದರ್ಶಿ ಅಡ್ವೊಕೇಟ್ ಬದ್ರುದ್ದೀನ್ ಕುಕ್ಕಾಜೆ, ಉಪಾಧ್ಯಕ್ಷರಾದ ಆಸಿಫ್ ಅಬ್ದುಲ್ಲಾ ಉಲ್ಲಾಲ, ಫಾರೂಕ್ ದಾರಿಮಿ, ಜೊತೆ ಕಾರ್ಯದರ್ಶಿ ಆರಿಫ್ ಕಮ್ಮಾಜೆ, ವಿಖಾಯ ಚಯರ್ಮ್ಯಾನ್ ಇಬ್ರಾಹಿಂ ಕುಕ್ಕಟ್ಟೆ, ಇರ್ಫಾನ್ ಅಸ್ಲಮಿ , ಸಾಹುಲ್ ಹಮೀದ್ ಸೂರಿಂಜೆ,ಉವೈಸ್ ಮದನಿ ತೋಕೆ, ಶಾಕಿರ್ ಮಿತ್ತಬೈಲು, ಅಬ್ಬಾಸ್ ನಾಡಜೆ ಉಪಸ್ಥಿತರಿದ್ದರು.