ಮಂಗಳೂರು: ಕೊಳತ್ತಮಜಲು ಮಸೀದಿಯ ಕಾರ್ಯದರ್ಶಿ ಹಾಗೂ SKSSF ಕಾರ್ಯಕರ್ತ ಅಬ್ದುಲ್ ರಹ್ಮಾನ್ ಕೊಲೆ ಕರ್ನಾಟಕದ ಕಾಂಗ್ರೆಸ್ ಸರಕಾರದ ನಿರ್ಲಕ್ಷ ದಿಂದ ನಡೆದಿದೆ ಮತ್ತು ಈ ಕೊಲೆಗೆ ಕಾಂಗ್ರೇಸ್ ಸರಕಾರ ನೇರ ಹೊಣೆಯಾಗಿದೆ.
ಜಿಲ್ಲೆಯಲ್ಲಿ ಆಶ್ರಫ್ ಕೊಲೆ ಆರೋಪಿಗಳ ಬಂಧನ ಹಾಗೂ ದ್ವೇಷ ಭಾಷಣಗಾರರ ಬಂಧನ ನಡೆಯಲೇ ಇಲ್ಲ.
ಕೇವಲ ಕೇಸು ದಾಖಲಿಸಿ ಕಣ್ಣೋರೆಸುವ ತಂತ್ರ ವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಆಂಟಿ ಕಮ್ಮುನಲ್ ಪೋರ್ಸ್ ಎಂಬುದು ಹೇಳಿಕೆಗೆ ಸೀಮಿತವಾಗಿದೆ. ಅಬ್ದುಲ್ ರಹ್ಮಾನ್ ರವರ ಕೊಲೆ ಆರೋಪಿಗಳನ್ನು ಕೂಡಲೇ ಬಂದಿಸಬೇಕು. ಸರಕಾರ ಮೃತರ ಕುಟುಂಬ ಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು.
ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯ ದ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಗೃಹ ಸಚಿವರನ್ನು ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೂಡಲೇ ವಜಾ ಗೊಳಿಸಬೇಕು ಎಂದು SKSSF ದ.ಕ ಜಿಲ್ಲಾ ಸಮಿತಿ ಅಗ್ರಹ ಪಡಿಸುತಿದೆ.