ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿಶೀಟರ್ ಹಾಗೂ ಕೀರ್ತಿ, ಫಾಝಿಲ್ ಹಂತಕ ಸುಹಾಸ್ ಶೆಟ್ಟಿ ಎಂಬಾತನ ಹತ್ಯೆಯ ಪ್ರತಿಕಾರವಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಹದಿನೈದಕ್ಕೂ ಹೆಚ್ಚಿನ ಕಡೆಗಳಲ್ಲಿ ಅಮಾಯಕ ಮುಸ್ಲಿಮರ ಮೇಲೆ ದಾಳಿಗಳಾಗಿದ್ದು, ಇದೀಗ ಅದರ ಮುಂದುವರಿದ ಭಾಗವಾಗಿ ಬಂಟ್ವಾಳದ ಕೊಳತ್ತಮಜಲು ಎಂಬಲ್ಲಿ ಇಬ್ಬರು ಯುವಕರ ಮೇಲೆ ತಲ್ವಾರ್ ದಾಳಿ ನಡೆಸಿದ್ದಾರೆ. ಅದರಲ್ಲಿ ಓರ್ವ ಮೃತಪಟ್ಟಿದ್ದು, ಓರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಪೋಲಿಸ್ ಇಲಾಖೆ ಸಂಪೂರ್ಣವಾಗಿ ಸಂಘಪರಿವಾರದ ಜೊತೆ ಶಾಮೀಲಾಗಿರುವುದೇ ಈ ಎಲ್ಲಾ ಘಟನೆಗಳಿಗೆ ಕಾರಣ.
ಮೇ ಒಂದರಂದು ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ನಂತರ ಒಂದು ತಿಂಗಳ ಒಳಗೆ ಹದಿನೈದಕ್ಕೂ ಹೆಚ್ಚಿನ ಕಡೆಗಳಲ್ಲಿ ಅಮಾಯಕ ಮುಸ್ಲಿಮರ ಮೇಲೆ ತಲ್ವಾರ್ ದಾಳಿ ಆಗಿದೆ. ಬಜರಂಗದಳದ ನಾಯಕರಾದ ಭರತ್ ಕುಮ್ಡೇಲ್, ಶರಣ್ ಪಂಪ್ವೆಲ್, ನರಸಿಂಹ ಮಾಣಿ, ಶ್ರೀಕಾಂತ್ ಶೆಟ್ಟಿ, ಶಿವಾನಂದ ಮೆಂಡನ್ ಸಹಿತ ಹಲವರು ಸುಹಾಸ್ ಶೆಟ್ಟಿ ಹತ್ಯೆಗೆ ನಾವು ಪ್ರತಿಕಾರ ತೀರಿಸುತ್ತೇವೆ ಎಂದು ಹೇಳಿದರೂ ಸಹ ಪೊಲೀಸ್ ಇಲಾಖೆ ಕೇವಲ ಎಫ್ಐಆರ್ ದಾಖಲಿಸಿ ಮೌನವಾಗಿದ್ದಾರೆ. ಮುಂದುವರಿದು ಬಜ್ಪೆಯಲ್ಲಿ ಮೇ 25ರಂದು ಶ್ರದ್ಧಾಂಜಲಿ ಸಭೆಯ ಹೆಸರಲ್ಲಿ ಪ್ರತಿಕಾರದ ಹತ್ಯೆಗೆ ಸಂಚು ರೂಪಿಸಲು ಪೋಲಿಸ್ ಇಲಾಖೆ ಅನುಮತಿ ನೀಡಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಪ್ರತಿಕಾರದ ಬಗ್ಗೆ ಸಂದೇಶಗಳು ಬರುತ್ತಿದ್ದರೂ ಸಹ ಪೋಲಿಸ್ ಇಲಾಖೆ ಹತ್ಯೆ ನಡೆಯುವವರೆಗೂ ಮೌನ ಸಮ್ಮತಿ ನೀಡಿದೆ.
ಸುಹಾಸ್ ಶೆಟ್ಟಿ ಹತ್ಯೆಯ ನಂತರ ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯಲ್ಲಿ Anty communal Force ಸ್ಥಾಪನೆಯ ಬಗ್ಗೆ ಹೇಳಿಕೆ ನೀಡಿ ಹೋಗಿದ್ದಾರೆ. ನಂತರದ ದಿನಗಳಲ್ಲಿ ಸಂಘಪರಿವಾರದ ಅಟ್ಟಹಾಸ ಹೆಚ್ಚಾದರೂ ಸಹ ಗೃಹ ಇಲಾಖೆ ಸಂಪೂರ್ಣವಾಗಿ ಮೌನವಾಗಿರುವುದೇ ಈ ಹತ್ಯೆಗೆ ಕಾರಣ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಆರೋಪಿಸಿದ್ದಾರೆ.