Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

ಕದನ ವಿರಾಮ ಒಪ್ಪದಿದ್ದರೆ ವ್ಯಾಪಾರ ನಿಲ್ಲಿಸುವುದಾಗಿ ಟ್ರಂಪ್ ಬೆದರಿಕೆ; ಮೋದಿ ಒಪ್ಪಿಕೊಂಡಿದ್ದೇಕೆ? ವ್ಯಾಪಾರಿಗಳು ಯಾರು?

editor tv by editor tv
May 13, 2025
in ರಾಷ್ಟ್ರೀಯ
0
ಕದನ ವಿರಾಮ ಒಪ್ಪದಿದ್ದರೆ ವ್ಯಾಪಾರ ನಿಲ್ಲಿಸುವುದಾಗಿ ಟ್ರಂಪ್ ಬೆದರಿಕೆ; ಮೋದಿ ಒಪ್ಪಿಕೊಂಡಿದ್ದೇಕೆ? ವ್ಯಾಪಾರಿಗಳು ಯಾರು?
1.9k
VIEWS
Share on FacebookShare on TwitterShare on Whatsapp

ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿಕೊಂಡಿದ್ದ ಟ್ರಂಪ್, ಸೋಮವಾರ ಹೊಸದಾಗಿ, ವ್ಯಾಪಾರ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ ಕಾರಣಕ್ಕೆ ಉಭಯ ದೇಶಗಳು ಒಪ್ಪಂದಕ್ಕೆ ಒಪ್ಪಿಕೊಂಡವು ಎಂದು ಹೇಳಿದ ನಂತರ ದೇಶದಾದ್ಯಂತ ಭಾರತದ ಸಾರ್ವಭೌಮತೆಯ ಬಗ್ಗೆ ವಿವಾದಗಳು ಎದ್ದಿವೆ. ಈ ಬಗ್ಗೆ ವಿಪಕ್ಷಗಳು ಸೇರಿದಂತೆ ಹೋರಾಟಗಾರರು ಪ್ರಧಾನಿ ಮೋದಿಗೆ ಸ್ಪಷ್ಟನೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ವ್ಯಾಪಾರಿಗಳ ಹಿತಾಸಕ್ತಿಗಾಗಿ ಪ್ರಧಾನಿ ಮೋದಿ ದೇಶದ ಸಾರ್ವಭೌಮತೆಯನ್ನು, ದೇಶದ ಗೌರವವನ್ನು ಮತ್ತೊಂದು ದೇಶದ ಮುಂದೆ ಕಳೆದುಕೊಳ್ಳುವುದು ಸರಿಯೆ ಎಂದು ಪ್ರಶ್ನಿಸಿದ್ದಾರೆ. 

ಪಹಲ್ಗಾಮ್ ದಾಳಿಯು ಪಾಕಿಸ್ತಾನ ಪ್ರೇರಿತ ಎಂದು ಹೇಳಿಕೊಂಡಿದ್ದ ಭಾರತ, ಆಪರೇಷನ್ ಸಿಂಧೂರವನ್ನು ನಡೆಸಿ ನೆರೆಯ ದೇಶದ 9 ಭಯೋತ್ಪಾದಕ ಕೇಂದ್ರಗಳನ್ನು ನಾಶ ಮಾಡಿದ್ದಾಗಿ ತಿಳಿಸಿತ್ತು. ಇದರ ನಂತರ ಉಭಯ ದೇಶಗಳ ನಡುವೆ ನಾಲ್ಕು ದಿನಗಳ ಕಾಲ ನಡೆದ ಮಿಲಿಟರಿ ಸಂಘರ್ಷದಲ್ಲಿ ಭಾರತದ ಹಲವಾರು ನಾಗರಿಕರು ಮತ್ತು ಸೈನಿಕರು ಮೃತಪಟ್ಟಿದ್ದರು. ಅದಾಗ್ಯೂ, ಶನಿವಾರ ಕದನ ವಿರಾಮಕ್ಕೆ ಉಭಯ ದೇಶಗಳು ಒಪ್ಪಿಕೊಂಡಿದೆ ಎಂದು ಭಾರತ ಘೋಷಿಸುವ ಮುಂಚೆಯೆ, ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದರು.

ಅದಾಗ್ಯೂ, ಈ ವೇಳೆ ಕೂಡಾ ಭಾರತದ ಸಾರ್ವಭೌಮತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅದರ ನಂತರ ಸೋಮವಾರ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಲಾಗಿರುವ ವಿಡಿಯೊದಲ್ಲಿ ಅಮೆರಿಕೆ ಅಧ್ಯಕ್ಷ ಉಭಯ ದೇಶಗಳಿಗೆ ವ್ಯಾಪಾರ ಬೇಕೆಂದರೆ ಯುದ್ಧ ನಿಲ್ಲಿಸಿ ಎಂದು ಹೇಳಿದ ನಂತರ ಅವು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು ಎಂದು ಹೇಳಿದ್ದಾರೆ. ಈ ಹೇಳಿಕೆಯ ನಂತರ ಭಾರತ ಸಾರ್ವಭೌಮತೆಯ ಬಗ್ಗೆ ದೇಶದಾದ್ಯಂತ ಪ್ರಶ್ನೆಗಳು ಎದ್ದಿವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳನ್ನು ದ್ವಿಪಕ್ಷೀಯ ಒಪ್ಪಂದದ ಮೂಲಕ ಸಾಧ್ಯವಿಲ್ಲವೆ ಎಂದು ವಿಪಕ್ಷಗಳು ಕೇಳಿದ್ದು, ಅದಕ್ಕಾಗಿ ಮತ್ತೊಂದು ದೇಶದ ಮಧ್ಯಸ್ಥಿಕೆ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ

ಭಾರತ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಡುವಿನ ವ್ಯಾಪಾರ ಸಂಬಂಧಗಳು ವಿಶ್ವದ ಅತಿದೊಡ್ಡ ಆರ್ಥಿಕ ಸಂಬಂಧಗಳಲ್ಲಿ ಒಂದಾಗಿದೆ. ಇದು ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರದ ಮೂಲಕ ಗುಣಾತ್ಮಕವಾಗಿ ಬೆಳೆಯುತ್ತಿದೆ. 2023ರಲ್ಲಿ, ಭಾರತ-ಅಮೆರಿಕ ಒಟ್ಟು ವ್ಯಾಪಾರವು ಸರಕು ಮತ್ತು ಸೇವೆಗಳಲ್ಲಿ $191 ಬಿಲಿಯನ್‌ಗೆ ತಲುಪಿದೆ. ಇದರಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತು $118 ಬಿಲಿಯನ್ ಮತ್ತು ಆಮದು $73 ಬಿಲಿಯನ್ ಆಗಿತ್ತು.

ಅಮೆರಿಕಾದಲ್ಲಿ ಭಾರತೀಯ ಕಂಪನಿಗಳಿಂದ ಒಟ್ಟು ವಿದೇಶಿ ನೇರ ಹೂಡಿಕೆ (FDI) $40 ಬಿಲಿಯನ್‌ಗಿಂತ ಹೆಚ್ಚಾಗಿದೆ. ಅಮೆರಿಕಾದಲ್ಲಿ ಭಾರತದ 163 ಕಂಪನಿಗಳು ಒಟ್ಟು $40 ಬಿಲಿಯನ್ ಹೂಡಿಕೆಯನ್ನು ಮಾಡಿದೆ.

ಪ್ರಮುಖ ಸರಕುಗಳು: ಭಾರತವು ಅಮೆರಿಕಕ್ಕೆ ಔಷಧಗಳು, ಜವಳಿ, ರತ್ನಗಂಬಳಿಗಳು, ಮಾಹಿತಿ ತಂತ್ರಜ್ಞಾನ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳನ್ನು ರಫ್ತು ಮಾಡುತ್ತದೆ. ಅಮೆರಿಕದಿಂದ ಭಾರತಕ್ಕೆ ವಿಮಾನಯಾನ ಉತ್ಪನ್ನಗಳು, ಯಂತ್ರೋಪಕರಣಗಳು, ಕೃಷಿ ಉತ್ಪನ್ನಗಳು ಮತ್ತು ತೈಲ-ಗ್ಯಾಸ್ ಆಮದಾಗುತ್ತವೆ.

ಸೇವೆಗಳು: ಭಾರತದ ಐಟಿ ಮತ್ತು ಸಾಫ್ಟ್‌ವೇರ್ ಸೇವೆಗಳು, ವಿಶೇಷವಾಗಿ ಬೆಂಗಳೂರು ಮತ್ತು ಹೈದರಾಬಾದ್‌ನಿಂದ, ಅಮೆರಿಕದ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. 2022ರಲ್ಲಿ, ಭಾರತದ ಸೇವಾ ರಫ್ತು ಅಮೆರಿಕಕ್ಕೆ $32 ಬಿಲಿಯನ್‌ಗಿಂತ ಹೆಚ್ಚಿತ್ತು.

ವಿದೇಶಿ ನೇರ ಹೂಡಿಕೆ (FDI):

ಅಮೆರಿಕವು ಭಾರತದಲ್ಲಿ ಅತಿದೊಡ್ಡ ವಿದೇಶಿ ಹೂಡಿಕೆದಾರರಲ್ಲಿ ಒಂದಾಗಿದೆ, 2000-2023ರ ನಡುವೆ $61 ಬಿಲಿಯನ್‌ಗಿಂತ ಹೆಚ್ಚಿನ FDI ಹರಿದುಬಂದಿದೆ. ಅಮೆರಿಕದ ಕಂಪನಿಗಳಾದ ಗೂಗಲ್, ಅಮೆಜಾನ್, ಮತ್ತು ಟೆಸ್ಲಾ ಭಾರತದಲ್ಲಿ ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿವೆ. ಭಾರತೀಯ ಕಂಪನಿಗಳಾದ ಟಾಟಾ, ರಿಲಯನ್ಸ್, ಮತ್ತು ಇನ್ಫೋಸಿಸ್ ಅಮೆರಿಕದಲ್ಲಿ ತಂತ್ರಜ್ಞಾನ, ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿವೆ.

ಅಮೆರಿಕಾದಲ್ಲಿ ಅತ್ಯಂತ ಹೆಚ್ಚು ಹೂಡಿಕೆ ಮಾಡಿರುವವರು ಯಾರು?

ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿಗಳಾದ ಗೌತಮ್ ಅದಾನಿ (ಅದಾನಿ ಗ್ರೂಪ್) ಮತ್ತು ಮುಕೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್) ಅಮೆರಿಕದಲ್ಲಿ ಅತ್ಯಂತ ಹೆಚ್ಚು ಹೂಡಿಕೆ ಮಾಡಿರುವ ಭಾರತೀಯ ಉದ್ಯಮಿಗಳಾಗಿದ್ದಾರೆ. ಈ ಇಬ್ಬರು ಉದ್ಯಮಿಗಳ ಕಂಪನಿಗಳು ಶಕ್ತಿ, ಮೂಲಸೌಕರ್ಯ, ತಂತ್ರಜ್ಞಾನ, ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿವೆ.

ಗೌತಮ್ ಅದಾನಿ (ಅದಾನಿ ಗ್ರೂಪ್):

ಅದಾನಿ ಗ್ರೂಪ್ 2024ರಲ್ಲಿ ಅಮೆರಿಕದಲ್ಲಿ $10 ಬಿಲಿಯನ್ (ಸುಮಾರು ₹83,000 ಕೋಟಿ) ಹೂಡಿಕೆಯ ಯೋಜನೆಯನ್ನು ಘೋಷಿಸಿತ್ತು. ಇದು ಶಕ್ತಿ (ವಿಶೇಷವಾಗಿ ಹಸಿರು ಶಕ್ತಿ) ಮತ್ತು ಮೂಲಸೌಕರ್ಯ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಹೂಡಿಕೆಯು ಭಾರತೀಯ ಕಂಪನಿಗಳು ಅಮೆರಿಕಾದಲ್ಲಿ ಮಾಡಲಾದ ಒಟ್ಟು $40 ಬಿಲಿಯನ್ ಹೂಡಿಕೆಯಲ್ಲಿ ಸುಮಾರು 25% ಪಾಲನ್ನು ಹೊಂದಿದೆ.

ಮುಕೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್):

ವಾಸ್ತವದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ನೇರ ಹೂಡಿಕೆಯ ನಿಖರ ಮೊತ್ತವನ್ನು ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ ಎಂದು ವರದಿಗಳು ಹೇಳುತ್ತವೆ. ಅದಾಗ್ಯೂ ಅಂದಾಜಿನ ಪ್ರಕಾರ, ಅಮೆರಿಕಾದಲ್ಲಿ ಭಾರತೀಯರು ಹೂಡಿಕೆ ಮಾಡಿರುವ ಒಟ್ಟು ಮೊತ್ತದ 10-15% ಪಾಲಿನಷ್ಟಿದೆ ಎನ್ನಲಾಗಿದೆ.

ಮುಖೇಶ್ ಅಂಬಾನಿಯ ರಿಲಯನ್ಸ್‌ ಸಂಸ್ಥೆಯು ತೈಲ ಶುದ್ಧೀಕರಣ ಮತ್ತು ಪೆಟ್ರೋಕೆಮಿಕಲ್ ವ್ಯವಹಾರಗಳನ್ನು ನಡೆಸುತ್ತಿದೆ. ಕಂಪನಿಯು ಅಮೆರಿಕದಿಂದ $33 ಬಿಲಿಯನ್ ಮೌಲ್ಯದ ಕಚ್ಚಾ ತೈಲ ಆಮದು ಮಾಡಿಕೊಂಡಿದ್ದು, ಶಕ್ತಿ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ ಎನ್ನಲಾಗಿದೆ. Jio Platforms ಮೂಲಕ ಡಿಜಿಟಲ್ ಸೇವೆಗಳು ಮತ್ತು ಟೆಕ್ ಆವಿಷ್ಕಾರಗಳನ್ನು, ರೀಟೇಲ್ ಮತ್ತು ಇ-ಕಾಮರ್ಸ್ ವಿಭಾಗಗಳಲ್ಲಿ ಹೂಡಿಕೆ ಮಾಡಿದೆ ಎಂದು ವರದಿಯಾಗಿದೆ.

ಅದಾನಿ ಮತ್ತು ಅಂಬಾನಿ ಮಾತ್ರವಲ್ಲದೆ ಭಾರತದ ಇತರ ಕಂಪನಿಗಳು ಕೂಡಾ ಅಮೆರಿಕದಲ್ಲಿ ಗಣನೀಯ ಹೂಡಿಕೆ ಮಾಡಿವೆ:

  • ಟಾಟಾ ಗ್ರೂಪ್: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ (JLR) ಮೂಲಕ $20 ಬಿಲಿಯನ್ಗಿಂತ ಹೆಚ್ಚಿನ ವಿಲೀನ-ಸ್ವಾಧೀನ (M&A) ಒಪ್ಪಂದಗಳನ್ನು ಮಾಡಿಕೊಂಡಿದೆ.
  • ಆದಿತ್ಯ ಬಿರ್ಲಾ ಗ್ರೂಪ್: 2025ರಲ್ಲಿ ಟೆಕ್ಸಾಸ್‌ನಲ್ಲಿ $50 ಮಿಲಿಯನ್ ಹೂಡಿಕೆಯೊಂದಿಗೆ ಎಪಾಕ್ಸಿ ರೆಸಿನ್ ಉತ್ಪಾದನಾ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದೆ.
  • ಒಯೊ: 2025ರಲ್ಲಿ ಅಮೆರಿಕದ G6 ಹಾಸ್ಪಿಟಾಲಿಟಿಯ ಡಿಜಿಟಲ್ ಆಸ್ತಿಗಳಲ್ಲಿ $10 ಮಿಲಿಯನ್ (₹86.69 ಕೋಟಿ) ಹೂಡಿಕೆ ಘೋಷಿಸಿದೆ.
  • ಜಯ್ ಚೌಧರಿ (Zscaler): ಜಯ್ ಚೌಧರಿ ಅವರ Zscaler ಕಂಪನಿಯು ಸೈಬರ್‌ಸೆಕ್ಯುರಿಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಅವರ ಆಸ್ತಿಯ ಮೌಲ್ಯ $9.37 ಬಿಲಿಯನ್ ಆಗಿದೆ.

ಕೃಪೆ :ನಾನು ಗೌರಿ

Previous Post

CBSE Class 12 Results 2025: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್ ಪರಿಶೀಲಿಸುವ ಲಿಂಕ್​​ ಇಲ್ಲಿದೆ

Next Post

ಕರ್ನಾಟಕಕ್ಕೆ ಸಿಡಿಲ ಆಘಾತ.. ಒಂದೇ ದಿನ 7 ಮಂದಿ ಜೀವ ತೆಗೆದ ಬೆಳ್ಮಿಂಚು

Next Post
ಕರ್ನಾಟಕಕ್ಕೆ ಸಿಡಿಲ ಆಘಾತ.. ಒಂದೇ ದಿನ 7 ಮಂದಿ ಜೀವ ತೆಗೆದ ಬೆಳ್ಮಿಂಚು

ಕರ್ನಾಟಕಕ್ಕೆ ಸಿಡಿಲ ಆಘಾತ.. ಒಂದೇ ದಿನ 7 ಮಂದಿ ಜೀವ ತೆಗೆದ ಬೆಳ್ಮಿಂಚು

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.