ಭಾರತ – ಪಾಕಿಸ್ತಾನದ ನಡುವೆ ಉಂಟಾಗಿರುವ ಉದ್ವಿಗ್ನತೆಯ ನಡುವೆ ಹಲವಾರು ಸುಳ್ಳು ಸುದ್ದಿಗಳು, ವಿಡಿಯೊ, ಚಿತ್ರ, ಬರಹದ ಮೂಲಕ ಹರಿದಾಡುತ್ತಿವೆ. ಹೆಚ್ಚಿನ ಸುದ್ದಿಗಳಲ್ಲಿ ವಿಡಿಯೊ ಗೇಮ್ ದೃಶ್ಯಗಳು, ಇಸ್ರೇಲ್-ಗಾಝಾದ ವಿಡಿಯೊಗಳು ಮತ್ತು ಹಳೆಯ ವಿಡಿಯೊಗಳನ್ನು ಹಂಚಿ ಸುಳ್ಳು ಹರಡಲಾಗುತ್ತಿವೆ. ಅವುಗಳಲ್ಲಿ ಕೆಲವು ಸುಳ್ಳು ಸುದ್ದಿಗಳನ್ನು ನಾನುಗೌರಿ.ಕಾಂ ಓದುಗರಿಗಾಗಿ ನೀಡುತ್ತಿದ್ದೇವೆ
ವಿಡಿಯೊ ಗೇಮ್ ದೃಶ್ಯಗಳನ್ನು ವಾಯು ದಾಳಿಯ ವಿಡಿಯೊಗಳು ಎಂದು ಹೇಳಿ, ಸಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮಾಧ್ಯಮ ಪಬ್ಲಿಕ್ ಟಿವಿ, ಪ್ರತಿಧ್ವನಿ.ಕಾಂ ಸೇರಿದಂತೆ, ಹಲವಾರು ಜನರು ಹಂಚಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಇವುಗಳು ನಿಜವಾದ ವಾಯು ದಾಳಿಯ ದೃಶ್ಯಗಳಲ್ಲ.

ಅವುಗಳಲ್ಲಿ ಕೆಲವು ಇಂತಿವೆ. ಸ್ವತಂತ್ರ ಮಾಧ್ಯಮ ಪ್ರತಿಧ್ವನಿ ಕೂಡಾ ಇಂತಹ ವಿಡಿಯೊಗಳನ್ನು ಹಂಚಿಕೊಳ್ಳುತ್ತಿವೆ
ಈ ಹಿಂದೆ ಪಾಕಿಸ್ತಾನಿ ಪ್ರೊಪಗಾಂಡ ಖಾತೆಗಳು ಭಾರತದ ವಿರುದ್ಧ ಹಂಚಿಕೊಂಡಿದ್ದ ವಿಡಿಯೊಗಳನ್ನು ಭಾರತೀಯರು ಇದೀಗ ಹಂಚಿಕೊಳ್ಳುತ್ತಿದ್ದಾರೆ. “ಈ ವಿಡಿಯೊವನ್ನು ಕೆಲವರು ಸಿನಿಮಾ ದೃಶ್ಯಗಳು ಎಂದು ಹೇಳುತ್ತಿದ್ದಾರೆ. ಆದರೆ ಒರಿಜಿನಲ್ ಯಾವುದು ಎಂದು ಕಂಡು ಹಿಡಿಯಲು ಈವರೆಗೆ ಆಗಿಲ್ಲ” ಎಂದು ಖ್ಯಾತ ಫ್ಯಾಕ್ಟ್‌ಚೆಕ್ಕರ್ ಮೊಹಮ್ಮದ್ ಜುಬೇರ್ ಹೇಳಿದ್ದಾರೆ.
ಈ ವಿಡಿಯೊವನ್ನು ಸಂಸದೆ ಕಂಗನಾ ರಣಾವತ್ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಅವುಗಳನ್ನು ನೀವು ನೋಡಬಹುದಾಗಿದೆ.
ವಿಡಿಯೊ ಗೇಮ್ ದೃಶ್ಯವನ್ನು ಹಂಚಿಕೊಂಡ ಪಬ್ಲಿಕ್ ಟಿವಿ


ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳ ಮೇಲೆ ನಡೆಸಿದ ಆಪರೇಷನ್ ಸಿಂಧೂರ ನಡೆದ ನಂತರ ಅದರ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಕರ್ನಲ್ ಖುರೇಷಿ ಎಂದು ಪ್ರತಿಪಾದಿಸಿ ಹಳೆಯ ಸಂಬಂಧವಿಲ್ಲದೆ ವಿಡಿಯೊವೊಂದು ಹರಿದಾಡುತ್ತಿವೆ
ವಾಸ್ತವದಲ್ಲಿ ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅಲ್ಲ. ವಿಡಿಯೊದಲ್ಲಿರುವವರು ಅಮೆರಿಕಾದ ವಾಯುಪಡೆಯಲ್ಲಿ ಪೈಲಟ್ ಆಗಿರುವ ಮೇಜರ್ ಕ್ರಿಸ್ಟೀನ್ ‘ಬ್ಯೂ’ ವುಲ್ಫ್. ಈ ವಿಡಿಯೊ 2021ರದ್ದಾಗಿದೆ. ಸುಳ್ಳು ಹಂಚಿರುವ ವಿಡಿಯೊವನ್ನು ಇಲ್ಲಿ ನೋಡಬಹುದು.


ಕನ್ನಡ ಮಾಧ್ಯಮ ಕನ್ನಡಫಸ್ಟ್ ನ್ಯೂಸ್, ಐಎನ್‌ಎಸ್ ವಿಕ್ರಾಂತ್ ಮಾರಕ ದಾಳಿ ಎಂದು ಮಾಡಿರುವ ವರದಿಯಲ್ಲಿ ಇಸ್ರೇಲ್ – ಗಾಝಾ ಸಂಘರ್ಷದ 2020ರ ಚಿತ್ರವನ್ನು ಬಳಸಿಕೊಂಡಿದೆ. ಅವನ್ನು ನೀಡುವ ಇಲ್ಲಿ ನೋಡಬಹುದು.
