ಮಂಗಳೂರಿನ ರೌಡಿಶೀಟರ್, ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ದೊಡ್ಡ ತಿರುವು ದೊರೆತಿದೆ. ಪ್ರಕರಣಕ್ಕೆ ಸಂಬಂಧಿಸಿದ ಈವರೆಗೆ ಬಂಧಿಸಲಾಗಿರುವ 8 ಮಂದಿಯ ಪೈಕಿ ಇಬ್ಬರು ಹಿಂದುಗಳು ಎಂಬುದು ಗೊತ್ತಾಗಿದೆ. , ಹತ್ಯೆ ಪ್ರತೀಕಾರಕ್ಕೆ . ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಯಾರೆಲ್ಲಾ ಅರೆಸ್ಟ್?
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿರುವಂತೆ ಬಂಧಿತ 8 ಆರೋಪಿಗಳ ಪೈಕಿ ಇಬ್ಬರು ಹಿಂದೂಗಳಿದ್ದಾರೆ. ಅವರ ವಿವರನ್ನು ನೀಡಿದ್ದಾರೆ. ಅಬ್ದುಲ್ ಸಫ್ವಾನ್ (29), ನಿಯಾಜ್ (28), ಕಲಂದರ್ ಶಾಫಿ (31), ಮೊಹಮ್ಮದ್ ಮುಝಮ್ಮಿಲ್ (32), ರಂಜಿತ್ (19), ನಾಗರಾಜ್ (20), ಮೊಹಮ್ಮದ್ ರಿಜ್ವಾನ್ (28) ಮತ್ತು ಆದಿಲ್ ಮೆಹರೂಫ್ ಬಂಧಿತರು.

ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದೇನು?
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಸಫ್ವಾನ್ ಪ್ರಮುಖ ಆರೋಪಿ. 2023ರಲ್ಲಿ ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಸಫ್ವಾನ್ಗೆ ಸುಹಾಸ್ ಶೆಟ್ಟಿ ಕೊಲೆ ಮಾಡುವ ಆತಂಕ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಫಾಜಿಲ್ ತಮ್ಮ ಆದಿಲ್ ಮೆಹರೂಫ್ ನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನಿಸಿದ್ದರು ಎಂದು ಹೇಳಿದ್ದಾರೆ

ಸುಹಾಸ್ ಕೊಲೆ ಮಾಡಲು ಸಫ್ವಾನ್ ತಂಡಕ್ಕೆ ಆದಿಲ್ 5 ಲಕ್ಷ ರೂ. ನೀಡಿದ್ದ. ಈ 5 ಲಕ್ಷ ರೂಪಾಯಿಗಾಗಿ ಆದಿಲ್ ಫಂಡಿಂಗ್ ಮಾಡಿದ್ದ. ನಿಯಾಜ್ ಸ್ನೇಹಿತರಾದ ನಾಗರಾಜ್ ಮತ್ತು ರಂಜಿನ್ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ವಾಸವಿದ್ದರು. ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು.

ಚೂರಿ ಇರಿತಕ್ಕೆ ಪ್ರತೀಕಾರ ತೀರಿಸಿಕೊಂಡಿತಾ ಸಫ್ವಾನ್ ಗ್ಯಾಂಗ್?
ತನಿಖೆ ಆರಂಭಿಸಿದ ಪೊಲೀಸರಿಗೆ 2023ರ ಪ್ರಕರಣವೊಂದರ ಲಿಂಕ್ ಇರುವುದು ಗೊತ್ತಾಗಿತ್ತು. ಅದುವೇ ಸಫ್ವಾನ್ ಹಾಗೂ ಸುಹಾಸ್ ಶೆಟ್ಟಿಯ ಆಪ್ತನ ನಡುವಿನ ಗಲಾಟೆ. ಸಫ್ವಾನ್ ಎಂಬಾತನ ಜತೆಗೆ ಸುಹಾಸ್ ಶೆಟ್ಟಿ ಆಪ್ತ ಪ್ರಶಾಂತ್ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ವಿಚಾರಕ್ಕೆ ಮಾತುಕತೆ ನಡೆಸೋದಕ್ಕೆ ಸಫ್ವಾನ್ನನ್ನು ಕರೆದಿದ್ದ. ಮಾತಾನಾಡುವುದಕ್ಕೆ ಎಂದು ಕರೆದ ಪ್ರಶಾಂತ್ ಹಾಗೂ ಗ್ಯಾಂಗ್ 2023ರ ಸೆಪ್ಟೆಂಬರ್ನಲ್ಲಿ ಸಫ್ವಾನ್ಗೆ ಡ್ರ್ಯಾಗನರ್ನಿಂದ ಇರಿದಿತ್ತು. ಬಳಿಕ ಚೂರಿ ಇರಿತಕ್ಕೆ ಒಳಗಾದ ಸಫ್ವಾನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಚೂರಿ ಇರಿತ ಪ್ರಕರಣ ಬಳಿಕ ಸಫ್ವಾನ್ ಹಾಗೂ ಪ್ರಶಾಂತ್ ನಡುವೆ ದ್ವೇಷ ಹುಟ್ಟಿಸಿತ್ತು

ಸುಹಾಸ್ ಕೊಲೆಯಲ್ಲಿ ಇಬ್ಬರು ಹಿಂದೂ ಯುವಕರು!
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಕೇವಲ ಮುಸ್ಲಿಮರು ಅಷ್ಟೇ ಅಲ್ಲ, ಬ್ಬರು ಹಿಂದೂ ಯುವಕರು ಕೂಡ ಶಾಮೀಲಾಗಿದ್ದಾರೆ. ಆ ಪೈಕಿ ಮೊದಲನೆಯವನು ರಂಜಿತ್. ಮತ್ತೊಬ್ಬ ನಾಗರಾಜ್.
ಯಾರು ಈ ರಂಜಿತ್?
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ರುದ್ರ ಪಾದದ ರಂಜಿತ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸುಹಾಸ್ ಮೇಲೆ ದಾಳಿ ಮಾಡಲು ಈತನೇ ಲಾಂಗ್ ತಂದುಕೊಟ್ಟಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಯಾರು ಈ ನಾಗರಾಜ್?
ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್, ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮಾವಿನಕೆರೆ ನಿವಾಸಿ.
ಸದ್ಯ ಸುಹಾಸ್ ಹತ್ಯೆಯ ನೈಜ ಕಾರಣ ಖಾಕಿ ತನಿಖೆಯಲ್ಲಿ ಹೊರಬಿದ್ದಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮತ್ತಷ್ಟು ವಿಚಾರಗಳನ್ನು ಬಯಲಿಗೆಳೆಯಲು ತನಿಖೆ ಮುಂದುವರಿಸಿದ್ದಾರೆ.