ಬೆಂಗಳೂರು: ಮಂಗಳೂರಿನಲ್ಲಿ (Mangaluru) ನಡೆದ ಸುಹಾಸ್ ಶೆಟ್ಟಿ ಹತ್ಯೆಯು ಧರ್ಮದ ನಡುವೆ ಆದ ಗಲಾಟೆ ಅಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ (U T Khader) ಎಂದು ಹೇಳಿದ್ದಾರೆ.

ರೌಡಿ ಶೀಟರ್ ಸುಹಾಸ್ ಶೆಟ್ಟಿ (Suhas Shetty) ಹತ್ಯೆಯ ಕುರಿತು ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಹತ್ಯೆ ಪ್ರಕರಣವನ್ನು ಖಂಡಿಸುತ್ತೇನೆ. ಇದು ವೈಯುಕ್ತಿಕವಾಗಿ ಆದ ಗಲಾಟೆ. ಜಾತಿ, ಜಾತಿಯ ನಡುವೆ ಅಥವಾ ಧರ್ಮದ ನಡುವೆ ಆದ ಗಲಾಟೆ ಅಲ್ಲ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು

ನಮ್ಮ ಜಿಲ್ಲೆಯನ್ನು ನಾವು ಮುಂದೆ ತೆಗೆದುಕೊಂಡು ಹೋಗಲು ಎಲ್ಲರೂ ಸಹಕಾರ ನೀಡಬೇಕು. ಯಾವುದೇ ಸಮಾಜ, ಧರ್ಮ ನಮ್ಮ ಮಂಗಳೂರನ್ನು ಹಿಂದೆ ಕೊಂಡೊಯ್ಯಬಾರದು. ಈ ರೀತಿ ಕೃತ್ಯಗಳು ಬಹಿರಂಗ ಆದಾಗ ದ್ವೇಷ ಭಾವೆನ ಬರುವುದು ಸ್ವಾಭಾವಿಕ. ಇದನ್ನು ನಿಭಾಯಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು ಎಂದರು

ಫಾಜಿಲ್ ಹತ್ಯೆಗೆ ಪ್ರತೀಕಾರ ಎಂಬ ಭಾವನೆ ಜನರಿಗೆ ಇತ್ತು. ಫಾಜಿಲ್ ತಂದೆಯೇ ಫೋನ್ ಮಾಡಿ ಇಂಥ ಪ್ರತೀಕಾರ ನಮ್ಮದಲ್ಲ ಎಂದು ಹೇಳಿದ್ದಾರೆ. ಫಾಜಿಲ್ ಕುಟುಂಬಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ ನಾವು ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇವೆ ಎಂದು ಹೇಳಿದರು.

ಈ ಹತ್ಯೆಯ ಕುರಿತು ರಾಜಕೀಯವಾಗಿ ನಾನು ಉತ್ತರ ಕೊಡಲ್ಲ. ಯಾರೆಲ್ಲ ಆರೋಪ ಮಾಡುತ್ತಿದ್ದಾರೆ ಆತ್ಮಾವಲೋಕನ ಮಾಡಿಕೊಳ್ಳಲಿ. ರಾಜಕೀಯವಾಗಿ ಯಾರೂ ಇದನ್ನು ಬಳಸಿಕೊಳ್ಳಬೇಡಿ. ಜಿಲ್ಲೆಯನ್ನು ಹಿಂದಕ್ಕೆ ಕೊಂಡೊಯ್ಯಬೇಡಿ ಎಂದು ಮನವಿ ಮಾಡಿಕೊಂಡರು.