ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುಪ್ವಾರಾ ಜಿಲ್ಲೆಯ ಕಂಡಿಖಾಸ್ ಪ್ರದೇಶದಲ್ಲಿ ಉಗ್ರರು ಸಾಮಾಜಿಕ ಕಾರ್ಯಕರ್ತನನ್ನು (Social Activist) ಗುಂಡಿಟ್ಟು ಕೊಂದಿದ್ದಾರೆ.
ರಸೂಲ್ ಮಗ್ರೆ (45) ಉಗ್ರರ (Terrorist) ಗುಂಡೇಟಿಗೆ ಬಲಿಯಾದ ವ್ಯಕ್ತಿ. ಶನಿವಾರ ರಾತ್ರಿ ಇವರ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಹೊಟ್ಟೆ ಮತ್ತು ಎಡ ಮಣಿಕಟ್ಟಿಗೆ ಗುಂಡು ತಗುಲಿತ್ತು

ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಕುಪ್ವಾರಾದ ಹಂದ್ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ
ಉಗ್ರರು ಸಾಮಾಜಿಕ ಕಾರ್ಯಕರ್ತನನ್ನು ಗುರಿಯಾಗಿಸಿ ಹತ್ಯೆ ಮಾಡಿದ ಉದ್ದೇಶ ತಿಳಿದು ಬಂದಿಲ್ಲ. ಭದ್ರತಾ ಪಡೆಗಳು ರಸೂಲ್ ಮಗ್ರೆ ನಿವಾಸಕ್ಕೆ ಆಗಮಿಸಿ ಪರಿಶೀಲಿಸುತ್ತಿವೆ
