Pahalgam Terrorist Attack: ಕಲಬುರಗಿಯ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದ್ದು, ಜನ ಸಾಮಾನ್ಯರಲ್ಲಿ ಅಚ್ಚಿರಿ ಮೂಡಿಸಿದ್ದು, ಪೊಲೀಸರ ನಿದ್ದೆಗೆಡಿಸಿತ್ತು. ರಸ್ತೆಗಳ ಮೇಲೆ ಪಾಕ್ ಧ್ವಜದ ಸ್ಟೀಕರ್ ಅಂಟಿಸಿರುವದ್ದಾಗಿ ಬಜರಂಗದಳದ ಕಾರ್ಯಕರ್ತರು ಒಪ್ಪಿಕೊಂಡ ಬಳಿಕ ಪ್ರಕರಣ ದಾಖಲಾಗಿದೆ. ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿ ಜನರ ಗೊಂದಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಲಬುರಗಿ, ಏಪ್ರಿಲ್ 26: ಜಮ್ಮು-ಕಾಶ್ಮೀರದ (Jammu-Kashmir) ಪಹಲ್ಗಾಮ್ನಲ್ಲಿ ಉಗ್ರರ ಗುಂಡಿನ ದಾಳಿ ಸಂಬಂಧಿಸಿದಂತೆ ಪಾಕಿಸ್ತಾನ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಸಮಯದಲ್ಲಿ ಕಲಬುರಗಿಯ ಜಗತ್ ವೃತ ಹಾಗು ನ್ಯಾಷನಲ್ ಚೌಕ್ ನ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ಗಳನ್ನು ರಸ್ತೆಗಳ ಮೇಲೆ ಸಾಲಾಗಿ ಅಂಟಿಸಲಾಗಿತ್ತು. ಹೀಗಾಗಿ ಸಹಜವಾಗಿಯೇ ಇದು ಜನಸಮಾನ್ಯರ ಅಚ್ಚರಿಗೆ ಕಾರಣವಾಗಿತ್ತು. ಇನ್ನು ಈ ರೀತಿ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ ಕಂಡು ಪೊಲೀಸರು ಸಹ ಅಲಟ್೯ ಆಗಿ ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದವರು ಯಾರು? ಎಂಬುದನ್ನು ಪತ್ತೆ ಮಾಡಲು ಮುಂದಾದರು. ಈ ಸಮಯದಲ್ಲಿ ಬಜರಂಗದಳದ ಕೆಲ ಕಾರ್ಯಕರ್ತರು ಸ್ಥಳಕ್ಕೆ ಬಂದು ಪಾಕಿಸ್ತಾನದ ಸ್ಟೀಕರ್ ಅಂಟಿಸಿರುವದಾಗಿ ಪೊಲೀಸರ ಮುಂದೆ ಹೇಳಿದ್ದಾರೆ. ಇದಾದ ಬಳಿಕ ಪೊಲೀಸರು ಪ್ರಕರಣ ದಾಖಳಿಸಿದ್ದಾರೆ.

ಕಲಬುರಗಿ ನಗರದ ನ್ಯಾಷನಲ್ ಚೌಕ್ ರಸ್ತೆಗಳ ಮೇಲೆ ಪಾಕಿಸ್ತಾನ ಸ್ಟಿಕರ್ ಅಂಟಿಸಿರುವದು ಕೆಲ ಕಾಲ ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಸ್ಥಳೀಯ ಕೆಲ ಮುಸ್ಲಿಂ ಮಹಿಳೆಯರು ರಸ್ತೆಗಳ ಮೇಲಿನ ಪಾಕಿಸ್ತಾನ ಧ್ವಜದ ಸ್ಟೀಕರ್ಗಳನ್ನು ತೆರವು ಮಾಡಿ ಇಲ್ಲಿ ಯಾರು ಪಾಕಿಸ್ತಾನ ಪ್ರೇಮಿಗಳಿಲ್ಲ, ನಮ್ಮ ದೇಶದಲ್ಲಿನ ಕೋಮುಸೌಹಾರ್ದ ಹಾಳು ಮಾಡಲು ಪಾಕಿಸ್ತಾನ ಸ್ಟೀಕರ್ ಅಂಟಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯ ಬಳಿಕ ಕಲಬುರಗಿ ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದಕ್ಕಾಗಿ 6 ಮಂದಿಯನ್ನು ವಶಕ್ಕೆ ಪಡೆದಿದ್ದೆವೆ. ಹೀಗಾಗಿ ಯಾರೇ ಯಾವ ರೀತಿಯಾದ ಹೋರಾಟ ಮಾಡುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಿ ಪ್ರತಿಭಟನೆ ಮಾಡುವಂತೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಮನವಿ ಮಾಡಿದ್ದಾರೆ
