ಆಕಸ್ಮಿಕವಾಗಿ ಪಂಜಾಬ್ ಗಡಿ ದಾಟಿದ ಭಾರತೀಯ ಯೋಧನನ್ನು ಪಾಕ್ ಸೆರೆ ಹಿಡಿದಿದ್ದು, ಶೀಘ್ರ ಅವರನ್ನು ಮರಳಿ ಕರೆತರುವಂತೆ ಯೋಧನ ಪತ್ನಿ ಮನವಿ ಮಾಡಿದ್ದಾರೆ.
ಹೂಗ್ಲಿ (ಪಶ್ಚಿಮ ಬಂಗಾಳ): ಎರಡು ದಿನಗಳ ಹಿಂದೆ ಆಕಸ್ಮಿಕವಾಗಿ ಪಂಜಾಬ್‌ನ ಫಿರೋಜ್‌ಪುರ ಗಡಿಯನ್ನು ಗಡಿ ದಾಟಿದ ಬಿಎಸ್ಎಫ್ ಯೋಧನನ್ನು ಪಾಕಿಸ್ತಾನ ರೇಂಜರ್ಸ್ ಬಂಧಿಸಿದ್ದು, ಈ ವಿಚಾರ ತಿಳಿದು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿರುವ ಯೋಧನ ಕುಟುಂಬ ಆತಂಕಕ್ಕೀಡಾಗಿದೆ.

ಯೋಧ ಪಿ.ಕೆ. ಸಿಂಗ್ ಸದ್ಯ ಪಾಕಿಸ್ತಾನದ ವಶದಲ್ಲಿದ್ದಾರೆ. ಅವರ ಬಿಡುಗಡೆಗೆ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ. ಪಿಕೆ ಸಿಂಗ್ ಅವರು ಮನೆ ಹೂಗ್ಲಿಯ ರಿಶ್ರಾದ ಹರಿಶಭಾದವರು. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಯೋಧನ ಪತ್ನಿ ರಜನಿ, ನಿನ್ನೆ(ಗುರುವಾರ) ನನ್ನ ಪತಿಯ ಸ್ನೇಹಿತರೊಬ್ಬರು ನನಗೆ ಮಾಹಿತಿ ನೀಡಿದರು. ಪತಿ ನಮ್ಮ ಬಳಿ ಬುಧವಾರ ರಾತ್ರಿ ಫೋನ್‌ನಲ್ಲಿ ಕೊನೆಯದಾಗಿ ಮಾತನಾಡಿದ್ದರು. ಅವರು ಶೀಘ್ರದಲ್ಲೇ ಮನೆಗೆ ಮರಳಬೇಕೆಂದು ನಾನು ಬಯಸುತ್ತೇನೆ. ಸರ್ಕಾರ ಅವರನ್ನು ಶೀಘ್ರ ಮರಳಿ ಕರೆತರಬೇಕು ಎಂದು ಮನವಿ ಮಾಡಿದ್ದಾರೆ.

40 ವರ್ಷದ ಬಿಎಸ್‌ಎಫ್ ಯೋಧ ಪಿ.ಕೆ. ಸಿಂಗ್ ಬುಧವಾರ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಹೋಗುತ್ತಿದ್ದರು. ಈ ವೇಳೆ ಪಾಕಿಸ್ತಾನದ ಸೇನೆ ಅವರನ್ನು ಬಂಧಿಸಿದೆ. ಅಧಿಕೃತ ಮೂಲಗಳ ಪ್ರಕಾರ, ಅವರ ರಕ್ಷಣೆಗೆ ಬಿಎಸ್ಎಫ್ ಪಾಕ್ ರೇಂಜರ್‌ಗಳೊಂದಿಗೆ ಫ್ಲ್ಯಾಗ್ ಮೀಟಿಂಗ್ ನಡೆಸುತ್ತಿದೆ. ಇಂತಹ ಘಟನೆಗಳು ಉಭಯ ದೇಶಗಳ ಗಡಿಯಲ್ಲಿ ಸಾಮಾನ್ಯವಾಗಿ ನಡೆಯುತ್ತವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಆದರೆ ಪಹಲ್ಗಾಮ್ನಲ್ಲಿ 26 ಪ್ರವಾಸಿಗರ ಹತ್ಯೆಯಿಂದಾಗಿ ಭಾರತ-ಪಾಕಿಸ್ತಾನ ನಡುವಿನ ಸಂಬಂಧವು ಮತ್ತಷ್ಟು ಹದಗೆಟ್ಟಿದ್ದು, ಈ ಸಂದರ್ಭದಲ್ಲಿ ಯೋಧ ಪಾಕ್ನಲ್ಲಿ ಬಂಧಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಯೋಧನ ಕುಟುಂಬದಲ್ಲಿ ಪತ್ನಿ, ಏಳು ವರ್ಷದ ಮಗು ಸೇರಿದಂತೆ ಅವರ ತಂದೆ-ತಾಯಿ ಇದ್ದಾರೆ.

ಇದು ದುಃಖದ ವಿಷಯ. ಪಾಕಿಸ್ತಾನದವರು ನಮ್ಮ ದೇಶಕ್ಕೆ ನುಗ್ಗಿ ಭಯೋತ್ಪಾದಕ ಕೃತ್ಯ ಎಸಗುತ್ತಿದ್ದಾರೆ. ನಮ್ಮ ಸೈನಿಕನನ್ನೂ ಹಿಡಿದಿದ್ದಾರೆ. ಯೋಧ ಸಿಂಗ್ ಅವರನ್ನು ಬಿಡುಗಡೆ ಮಾಡಬೇಕು. ನಮ್ಮ ಯೋಧನನ್ನು ದೇಶಕ್ಕೆ ಕರೆತರುವಂತೆ ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ” ಯೋಧ ಪಿ.ಕೆ. ಸಿಂಗ್ ಅವರ ನೆರೆಹೊರೆಯರು ಆಗ್ರಹಿಸಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಬಿಎಸ್‌ಎಫ್ ಯೋಧ ಸಿಂಗ್ ಅವರು ಮಾರ್ಚ್ 31ರಂದು ರಜೆ ಮುಗಿಸಿ ಮನೆಯಿಂದ ಮರಳಿದ್ದು, ಪಂಜಾಬ್‌ನ ಫಿರೋಜ್‌ಪುರದ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು