Karnataka Budget Session: ವಿಧೇಯಕಗಳನ್ನು ಧ್ವನಿಮತಕ್ಕೆ ಹಾಕಿದಾಗ ಸದನದಲ್ಲಿ ಕೋಲಾಹಲ

ಬೆಂಗಳೂರು, 21 ಮಾರ್ಚ್: ವಿಧಾನ ಮಂಡಲದ ಕಲಾಪದಲ್ಲಿ ಇಂದು ಸ್ಪೀಕರ್ ಯುಟಿ ಖಾದರ್ ವಿಧೇಯಕಗಳನ್ನು (bills) ಸದನದ ಅನುಮೋದನೆಗೆಂದು ಧ್ವನಿಮತಕ್ಕೆ ಹಾಕಿದಾಗ ಕೋಲಾ ಹಲ ಸೃಷ್ಟಿಯಾಯಿತು. ವಿಧೇಯಕಗಳನ್ನು ವಿರೋಧಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸದಸ್ಯರು ಬಜೆಟ್ ಮತ್ತು ಚರ್ಚೆಯ ಪ್ರತಿಗಳನ್ನು ಹರಿದು ಸ್ಪೀಕರ್ ಅವರ ಮೇಲೆ ಎಸೆದರು. ನೆರವಿಗೆ ಧಾವಿಸುವ ಮಾರ್ಷಲ್ಗಳು ಸ್ಪೀಕರ್ ಸುತ್ತ ಗೋಡೆ ನಿರ್ಮಿಸಿ ಅವರ ಮೇಲೆ ಪೇಪರ್ ಗಳು ಬೀಳದಂತೆ ತಡೆದರು.
