ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲೊಂದು ಭಾರೀ ದುರಂತ ನಡೆದು ಹೋಗಿದೆ. ಪಾಳು ಬಿದ್ದಿದ್ದ ಕಟ್ಟಡದ ಕೆಳಗೆ ಎಂದಿನಂತೆ ವ್ಯಾಪಾರ ಮಾಡುತ್ತಿದ್ದವರು ದುರಂತ ಅಂತ್ಯ ಕಂಡಿದ್ದಾರೆ. ಇಂದು ಎಂದಿನಂತೆ ವ್ಯಾಪಾರಕ್ಕೆ ಬಂದು ಕುಳಿತದ್ದರು ಹಲವು ವ್ಯಾಪಾರಿಗಳು. ಈ ವೇಳೆ ದಿಢೀರ್ನೇ ಕಟ್ಟಡ ಕುಸಿದು ಬಿದ್ದಿದೆ. ಕುಸಿದು ಬಿದ್ದ ಕಟ್ಟಡದ ಅವಶೇಷಗಳ ಅಡಿ ಸಿಲುಕಿದ ವ್ಯಾಪಾರಿಗಳಲ್ಲಿ 4 ಜನ ವ್ಯಾಪಾರಿಗಳು ದುರಂತ ಅಂತ್ಯ ಕಂಡಿದ್ದಾರೆ.

ಇನ್ನು ಮೃತರಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಹೇಳಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ವ್ಯಾಪಾರಿಗಳು ಸಿಲುಕಿಕೊಂಡಿರುವ ಶಂಕೆಯೂ ಇದೆ.

ಸದ್ಯ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅವಶೇಷಗಳ ಅಡಿ ಇನ್ನೂ ಹಲವರು ಸಿಲುಕಿರುವ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
