ನವದೆಹಲಿ: ಜಂಟಿ ಸಂಸದೀಯ ಸಮಿತಿ ನೀಡಿದ ವರದಿ ಮೇರೆಗೆ ವಕ್ಫ್ (ತಿದ್ದುಪಡಿ) ಮಸೂದೆಗೆ (Waqf Amendment Bill) ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದೆ.
ಫೆ.13ರಂದು ಸಂಸತ್ತಿನಲ್ಲಿ ಮಂಡಿಸಲಾದ ಜಂಟಿ ಸಂಸದೀಯ ಸಮಿತಿ (JPC) ವರದಿ ಆಧರಿಸಿ ಫೆ.19ರ ಸಭೆಯಲ್ಲಿ ಸಂಪುಟ ತಿದ್ದುಪಡಿಗಳನ್ನು ಅಂಗೀಕರಿಸಿದ ಬಳಿಕ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ

ಸಂಸತ್ತಿನಲ್ಲಿ 2025ರ ಬಜೆಟ್ ಅಧಿವೇಶನದ (2025 Budget Session) ಮೊದಲಾರ್ಧದಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆ ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಈ ವೇಳೆ ವಿಕ್ಷಗಳು ಗದ್ದಲದಿಂದಾಗಿ ಸ್ವಲ್ಪ ಸಮಯದ ವರೆಗೆ ಕಲಾಪವನ್ನು ಮುಂದೂಡಲಾಯಿತು. ಅಲ್ಲದೇ ವಿಪಕ್ಷ ಸಂಸದರು ತಮ್ಮ ಭಿನ್ನಾಭಿಪ್ರಾಯವನ್ನು ಜೆಪಿಸಿ ವರದಿಯಲ್ಲಿ ತಿರುಚಲಾಗಿದೆ ಎಂದು ದೂರಿದರು. ಆದ್ರೆ ಕೇಂದ್ರವು ಈ ಆರೋಪವನ್ನು ನಿರಾಕರಿಸಿತು.

ಕಳೆದ ವಾರವಷ್ಟೇ ಮಸೂದೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಈ ಮೂಲಕ ಮಾರ್ಚ್ 10 ರಂದು ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ವಕ್ಫ್ ಆಸ್ತಿಗಳ ನೋಂದಣಿಯ ಗುರಿ ಹೊಂದಿತ್ತು ಎಂದು ಮೂಲಗಳು ತಿಳಿಸಿವೆ

ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ (Jagdambika Pal) ನೇತೃತ್ವದ ಜೆಪಿಸಿ, ಪ್ರತಿಪಕ್ಷಗಳ ಭಿನ್ನಾಭಿಪ್ರಾಯದ ನಡುವೆ ಶಾಸನಕ್ಕೆ ಹಲವು ತಿದ್ದುಪಡಿಗಳನ್ನು ಸೂಚಿಸಿದೆ. ಕಳೆದ ಜನವರಿಯಲ್ಲಿ ಜೆಪಿಸಿ ಸಭೆಯಲ್ಲಿ ವಿಪಕ್ಷ ಸಂಸದರು ಸೇರಿ ಇತರರು 44 ತಿದ್ದುಪಡಿಗಳಿಗೆ ಸೂಚಿಸಿದ್ರು. ಈ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳನ್ನು ಮಾತ್ರವೇ ಜಂಟಿ ಸಂಸದೀಯ ಸಮಿತಿ ಅಂಗೀಕರಿಸಿತು
ಪ್ರಮುಖ ತಿದ್ದುಪಡಿಗಳು:
ಪ್ರಸ್ತುತ ವಕ್ಫ್ ಕಾಯ್ದೆಯಲ್ಲಿನ ಕೆಲವು ಷರತ್ತುಗಳನ್ನು ರದ್ದುಗೊಳಿಸುವುದು. ಕೇಂದ್ರ ಮತ್ತು ರಾಜ್ಯ ವಕ್ಫ್ ಸಂಸ್ಥೆಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರ ಪ್ರಾತಿನಿಧ್ಯವನ್ನು ಮಾಡುವುದು ಸೇರಿದೆ.
ಒಂದು ಆಸ್ತಿ ವಕ್ಫ್ ಆಗಿದೆಯೇ ಅಥವಾ ಸರ್ಕಾರಕ್ಕೆ ಸೇರಿದೆಯೇ ಎಂಬ ವಿವಾದಗಳನ್ನು ಪರಿಹರಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡುವುದು. ವಕ್ಫ್ ಸಂಸ್ಥೆಗಳಲ್ಲಿ ಮುಸ್ಲಿಮೇತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಲು ಅಧಿಕಾರ ನೀಡುವುದಕ್ಕೆ ಒಪ್ಪಿಕೊಳ್ಳಲಾಗಿದೆ.
ಮಸೂದೆಯ ವಿರೋಧಿಗಳು ತಿದ್ದುಪಡಿಗಳು ವಕ್ಫ್ ಮಂಡಳಿಗಳ ಅಧಿಕಾರಗಳನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿವೆ ಎಂದು ಹೇಳಿದರು. ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ, ವಕ್ಫ್ ಮಂಡಳಿಗಳು ಯಾವುದೇ ಆಸ್ತಿಯನ್ನು ವಕ್ಫ್ ಭೂಮಿಯಾಗಿ ಬಲವಂತವಾಗಿ ಪರಿಶೀಲಿಸುವ ಉದ್ದೇಶವನ್ನು ಹೊಂದಿವೆ ಎಂದು ವಿರೋಧಿಗಳು ಹೇಳುತ್ತಾರೆ. ತಿದ್ದುಪಡಿಗಳು ಈ ಅಧಿಕಾರವನ್ನು ಪರಿಶೀಲಿಸುವ ಉದ್ದೇಶವನ್ನು ಹೊಂದಿವೆ.
ಮಸೂದೆಯನ್ನು ಆರಂಭದಲ್ಲಿ ಆಗಸ್ಟ್ 2023 ರಲ್ಲಿ ಜೆಪಿಸಿಗೆ ಅದರ ನಿಬಂಧನೆಗಳಿಗೆ ವಿರೋಧ ವ್ಯಕ್ತಪಡಿಸಿದ ನಂತರ ಕಳುಹಿಸಲಾಯಿತು. ಈಗ ಸಂಪುಟ-ಅನುಮೋದಿತ ಮಸೂದೆಯನ್ನು ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ಚರ್ಚೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಲಾಗುವುದು