Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ವಿದೇಶ

ಮಹತ್ವದ ಆದೇಶಗಳಿಗೆ ಸಹಿ ಮಾಡಿ ಪೆನ್ ಎಸೆದ ಡೊನಾಲ್ಡ್‌ ಟ್ರಂಪ್‌; ಟಾಪ್ 10 ನಿರ್ಧಾರಗಳ ವಿವರ ಇಲ್ಲಿದೆ!

editor tv by editor tv
January 21, 2025
in ವಿದೇಶ
0
ಮಹತ್ವದ ಆದೇಶಗಳಿಗೆ ಸಹಿ ಮಾಡಿ ಪೆನ್ ಎಸೆದ ಡೊನಾಲ್ಡ್‌ ಟ್ರಂಪ್‌; ಟಾಪ್ 10 ನಿರ್ಧಾರಗಳ ವಿವರ ಇಲ್ಲಿದೆ!
1.9k
VIEWS
Share on FacebookShare on TwitterShare on Whatsapp

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಟ್ ಟ್ರಂಪ್​​ಗೆ​ ಅದ್ಧೂರಿ ಪಟ್ಟಾಭಿಷೇಕ ನಡೆದಿದ್ದು, ಜೋ ಬೈಡನ್ ಆಡಳಿತಕ್ಕೆ ತೆರೆ ಬಿದ್ದಿದೆ. ಇಂದಿನಿಂದ ಅಮೆರಿಕದಲ್ಲಿ ಸುವರ್ಣಯುಗ ಅಂತ ಬಣ್ಣಿಸಿರೋ ಟ್ರಂಪ್ ಅಧಿಕಾರಕ್ಕೇರಿದ ಫಸ್ಟ್ ಡೇ ಫಸ್ಟ್​​ ಸ್ಟೆಪ್​​ ಮಹತ್ವದ ಘೋಷಣೆಗಳನ್ನು ಕೈಗೊಂಡಿದ್ದಾರೆ. ಇದರಿಂದ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಸಂಚಲನವೂ ಉಂಟಾಗಿದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಬಲಾಢ್ಯ ದೇಶ. ಪ್ರಪಂಚದಲ್ಲೇ ಅತ್ಯಂತ ಸಂಪದ್ಭರಿತ, ಪ್ರಭಾವಯುತ ರಾಷ್ಟ್ರ. 78 ವರ್ಷದ ಡೊನಾಲ್ಡ್ ಟ್ರಂಪ್​ಗೆ ಈಗ ದೊಡ್ಡಣ್ಣನ ಪದವಿ ಸಿಕ್ಕಿದೆ. ಶ್ವೇತಭವನದ ಸಿಂಹಾಸನದಲ್ಲಿ ಕೂತು ಮುಂದಿನ 4 ವರ್ಷಗಳ ಕಾಲ ಟ್ರಂಪ್ ರಾಜ್ಯಭಾರ ನಡೆಯಲಿದೆ.

ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್ 2.O ಯುಗಾರಂಭ
ಅಧಿಕಾರಕ್ಕೇರುತ್ತಲೇ ‘ದೊಡ್ಡಣ್ಣ’ ಮಹಾನ್ ಘೋಷಣೆ
ಅಮೆರಿಕದ ನೂತನ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್​ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಪದಗ್ರಹಣಗೈದ ಟ್ರಂಪ್ ಅಧಿಕಾರಕ್ಕೇರುತ್ತಲೇ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಈ ಪ್ರಮುಖ ನಿರ್ಧಾರಗಳನ್ನು ಕೈಗೊಂಡ ಡೊನಾಲ್ಡ್ ಟ್ರಂಪ್ ಅವರು ಸಹಿ ಮಾಡಿದ ಪೆನ್‌ಗಳಲ್ಲಿ ಎಸೆದು ಸಂಭ್ರಮ ಪಟ್ಟಿದ್ದಾರೆ.

🔥🚨BREAKING: President Trump is tossing pens to supporters after undoing 80 executive actions of the Biden administration. pic.twitter.com/WCaWACWj2i

— Dom Lucre | Breaker of Narratives (@dom_lucre) January 21, 2025

ಟಾಪ್ 10 ‘ಟ್ರಂಪ್​’ಕಾರ್ಡ್! 
ಆದೇಶ-01
ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ಬರಲು ನಿರ್ಧಾರ
ಚೀನಾಗಿಂತ ಹೆಚ್ಚು ಹಣ ಪಾವತಿಸುತ್ತಿರುವ ಹಿನ್ನೆಲೆ ಎಕ್ಸಿಟ್

ಆದೇಶ-02
ಅಮೆರಿಕದಲ್ಲಿ ಇನ್ಮುಂದೆ ವರ್ಕ್​ ಫ್ರಂ ಹೋಂ ಇರಲ್ಲ
ಕೋವಿಡ್ ಕಾರಣ ವರ್ಕ್​ ಫ್ರಂ ಹೋಂ ನೀಡಲಾಗಿತ್ತು

ಆದೇಶ-03
ಪ್ಯಾರಿಸ್​ ಕ್ಲೈಮೇಟ್ ಒಪ್ಪಂದದಿಂದಲೂ ಅಮೆರಿಕ ಎಕ್ಸಿಟ್
ತಾಪಮಾನ ಏರಿಕೆ ತಡೆಯುವ ನಿರ್ಣಯದಿಂದ ಹಿಂದಕ್ಕೆ

ಆದೇಶ-04
ಅಮೆರಿಕದಲ್ಲಿ ಇನ್ಮುಂದೆ ತೃತೀಯ ಲಿಂಗಕ್ಕೆ ಮಾನ್ಯತೆ ರದ್ದು
ಗಂಡು-ಹೆಣ್ಣು ಎರಡೇ ಲಿಂಗಗಳನ್ನು ಗುರುತಿಸಲು ನಿರ್ಧಾರ

ಆದೇಶ-05
ಅಮೆರಿಕದಲ್ಲಿ ಅಂದಾಜು 10 ಮಿಲಿಯನ್ ಅಕ್ರಮ ವಲಸಿಗರು ವಾಸ
ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ನಿರ್ಧರಿಸಿದ ಟ್ರಂಪ್​​

ಆದೇಶ-06
ಸಿಬಿಪಿ ಒನ್ ಅಪ್ಲಿಕೇಶನ್​ಗೆ ನಿಷೇಧ ಹೇರಿದ ಡೋನಾಲ್ಡ್​​ ಟ್ರಂಪ್
ಕಾನೂನುಬದ್ಧ ಅಮೆರಿಕ ಪ್ರವೇಶಕ್ಕಾಗಿ ಇದ್ದ CBP ಆ್ಯಪ್ ನಿಷೇಧ

ಆದೇಶ-07
ಎಲೆಕ್ಟ್ರಿಕ್ ವಾಹನಗಳ ಕಡ್ಡಾಯ ಆದೇಶ ಹಿಂಪಡೆದ ಅಧ್ಯಕ್ಷ ಟ್ರಂಪ್
ಅಮೆರಿಕ ಪ್ರಜೆಗಳು ತಮಗೆ ಬೇಕಾದ ಕಾರು ಖರೀದಿಸಲು ಸ್ವತಂತ್ರರು

ಆದೇಶ-08
ಕೆನಡಾ & ಮೆಕ್ಸಿಕೊ ಉತ್ಪನ್ನಗಳ ಮೇಲೆ ಶೇ.25 ಸುಂಕ ಹೆಚ್ಚಳ
ಚೀನಾದ ಸರಕು ಮೇಲೆ ಶೇ.60ರಷ್ಟು ಸುಂಕ ವಿಧಿಸಿದ ಟ್ರಂಪ್

ಆದೇಶ-09
ಇನ್ಮುಂದೆ ಅಮೆರಿಕಾದಲ್ಲಿ ಜನಿಸಿದ ವಿದೇಶಿ ಮಕ್ಕಳಿಗೆ ಪೌರತ್ವ ಸಿಗಲ್ಲ
ವಲಸೆ ತಪ್ಪಿಸಲು ಸ್ವಯಂಚಾಲಿತವಾಗಿ ಪೌರತ್ವ ನಿಯಮಕ್ಕೆ ನಿರ್ಬಂಧ

ಆದೇಶ-10
ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಭಯೋತ್ಪಾದಕ ಎಂದು ಘೋಷಣೆ
ಮಾದಕವಸ್ತು ಸಾಗಣೆ ಗ್ಯಾಂಗ್​ಗಳು ಭಯೋತ್ಪಾದಕ ಸಂಘಟನೆಗಳು

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ಬರುವ ನಿರ್ಧಾರಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಅಂಕಿತ ಹಾಕಿದ್ದಾರೆ. ಚೀನಾಗಿಂತ ಅಮೆರಿಕ ಹೆಚ್ಚು ಹಣ ಪಾವತಿಸುತ್ತಿರುವ ಹಿನ್ನೆಲೆ ಎಕ್ಸಿಟ್ ಆಗಿದ್ದಾರೆ. ಇನ್ನು ಅಮೆರಿಕದಲ್ಲಿ ಸರಕಾರಿ ಇಲಾಖೆಗಳಲ್ಲಿ ಇನ್ಮುಂದೆ ವರ್ಕ್​ ಫ್ರಂ ಹೋಂ ಇರಲ್ಲ. ಕೋವಿಡ್ ಕಾರಣ ವರ್ಕ್​ ಫ್ರಂ ಹೋಂ ನೀಡಲಾಗಿತ್ತು.. ಪ್ಯಾರಿಸ್​ ಕ್ಲೈಮೇಟ್ ಒಪ್ಪಂದದಿಂದಲೂ ಅಮೆರಿಕ ಎಕ್ಸಿಟ್ ಆಗಿದೆ. ಜಾಗತಿಕ ತಾಪಮಾನ ಏರಿಕೆ ತಡೆಯುವ ನಿರ್ಣಯದಿಂದ ಹಿಂದೆ ಸರಿದಿದೆ. ಇನ್ನು ಅಮೆರಿಕದಲ್ಲಿ ಇನ್ಮುಂದೆ ತೃತೀಯ ಲಿಂಗಕ್ಕೆ ಮಾನ್ಯತೆ ರದ್ದು ಮಾಡಿದ್ದಾರೆ.

ಗಂಡು-ಹೆಣ್ಣು ಎರಡೇ ಲಿಂಗಗಳನ್ನು ಗುರುತಿಸಲು ನಿರ್ಧಾರ ಮಾಡಿದ್ದಾರೆ. ಇನ್ನು ಅಮೆರಿಕದಲ್ಲಿ ಅಂದಾಜು 10 ಮಿಲಿಯನ್ ಅಕ್ರಮ ವಲಸಿಗರು ವಾಸ ಮಾಡುತ್ತಿದ್ದು ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಟ್ರಂಪ್​​ ನಿರ್ಧರಿಸಿದ್ದಾರೆ. ಸಿಬಿಪಿ ಒನ್ ಅಪ್ಲಿಕೇಶನ್​ಗೆ ನಿಷೇಧ ಹೇರಿದ ಡೋನಾಲ್ಡ್​​ ಟ್ರಂಪ್ ಕಾನೂನುಬದ್ಧ ಅಮೆರಿಕ ಪ್ರವೇಶಕ್ಕಾಗಿ ಇದ್ದ CBP ಆ್ಯಪ್ ನಿಷೇಧ ಮಾಡಿ ಆದೇಶಿಸಿದ್ದಾರೆ. ಅಮೆರಿಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಕಡ್ಡಾಯ ಆದೇಶವನ್ನ ಟ್ರಂಪ್ ಹಿಂಪಡೆದಿದ್ದಾರೆ. ಅಮೆರಿಕದ ಪ್ರಜೆಗಳು ತಮಗೆ ಬೇಕಾದ ಕಾರು ಖರೀದಿಸಲು ಸ್ವತಂತ್ರರು ಅಂತ ಘೋಷಿಸಿದ್ದಾರೆ. ಇನ್ನು ಕೆನಡಾ ಹಾಗೂ ಮೆಕ್ಸಿಕೊ ಉತ್ಪನ್ನಗಳ ಮೇಲೆ ಶೇ.25 ಸುಂಕ ಹೆಚ್ಚಳ ವಿಧಿಸಿದ್ದಾರೆ. ಇತ್ತ ಚೀನಾದ ಸರಕು ಮೇಲೆ ಶೇ.60ರಷ್ಟು ಸುಂಕ ವಿಧಿಸಿದ್ದಾರೆ. ಇನ್ನು ಇನ್ಮುಂದೆ ಅಮೆರಿಕದಲ್ಲಿ ಜನಿಸಿದ ವಿದೇಶಿ ಮಕ್ಕಳಿಗೆ ಇನ್ಮುಂದೆ ಅಲ್ಲಿನ ಪೌರತ್ವ ಸಿಗುವುದಿಲ್ಲ, ವಲಸೆ ತಪ್ಪಿಸಲು ಸ್ವಯಂಚಾಲಿತವಾಗಿ ಪೌರತ್ವ ನಿಯಮಕ್ಕೆ ನಿರ್ಬಂಧ ಹೇರಿದ್ದಾರೆ. ಇದರಿಂದಾಗಿ ಅಮೆರಿಕಾದಲ್ಲಿ ತಾತ್ಕಾಲಿಕ ವಿಸಾದಲ್ಲಿ ನೆಲೆಸಿರುವ ಭಾರತೀಯರಿಗೂ ಎಫೆಕ್ಟ್‌ ಆಗಲಿದೆ. ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಭಯೋತ್ಪಾದಕ ಎಂದು ಘೋಷಣೆ ಮಾಡಲಾಗುತ್ತೆ. ಮಾದಕವಸ್ತು ಸಾಗಣೆ ಗ್ಯಾಂಗ್​ಗಳು ಭಯೋತ್ಪಾದಕ ಸಂಘಟನೆಗಳು ಅಂತ ಘೋಷಣೆಗೆ ಸಹಿ ಹಾಕಿದ್ದಾರೆ.

Previous Post

ಕೋಟೆಕಾರು ಬ್ಯಾಂಕ್ ದರೋಡೆಕೋರರ ಮೇಲೆ ಮಂಗಳೂರು ಪೊಲೀಸರ ಗುಂಡಿನ ದಾಳಿ:ನಡೆದಿದ್ದೇನು?

Next Post

ದೇಹದ ಮೇಲೆ ತರಕಾರಿ ಬಿದ್ದಿತ್ತು, 1 ಗಂಟೆ ನಂತ್ರ ಜನ ಇರೋದು ಗೊತ್ತಾಯ್ತು- 9 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ರು: ಎಸ್‌ಪಿ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.