ಕೋಟೆಕಾರು ಬ್ಯಾಂಕ್ ದರೋಡೆಕೋರರ ಮೇಲೆ ಮಂಗಳೂರು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. 12 ಕೋಟಿ ಲೂಟಿ ಮಾಡಿದ ಪ್ರಮುಖ ಆರೋಪಿ ಮುಂಬೈ ಕಣ್ಣನ್ ಮಣಿಗೆ ಗುಂಡೇಟು ತಗುಲಿದೆ.

ಕೋಟೆಕಾರು ಬ್ಯಾಂಕ್‌ನಿಂದ ದರೋಡೆ ಮಾಡಿದ ಆರೋಪಿಗಳು ತಮಿಳುನಾಡಿನಲ್ಲಿ ಸಿಕ್ಕಿಬಿದ್ದಿದ್ದರು. ತಮಿಳುನಾಡಿನಿಂದ ಆರೋಪಿಗಳನ್ನು ಮಂಗಳೂರಿಗೆ ಕರೆ ತಂದು ಮಹಜರು ಮಾಡುವ ವೇಳೆ ಆರೋಪಿ ಕಣ್ಣನ್ ಮಣಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರ ಮೇಲೆ ಕಣ್ಣನ್ ಮಣಿ ದಾಳಿ ನಡೆಸಲು ಯತ್ನಿಸಿದ್ದು, ಸಿಸಿಬಿ ಇನ್ಸ್‌ಪೆಕ್ಟರ್ ರಫೀಕ್ ಅವರು ಶೂಟ್ ಮಾಡಿದ್ದಾರೆ.

ನಿನ್ನೆ ತಮಿಳುನಾಡಿನ ತಿರುವನ್ವೇಲಿ ಪದ್ಮನೇರಿ ಗ್ರಾಮವೊಂದರಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಆರೋಪಿಗಳನ್ನ ಮಂಗಳೂರಿಗೆ ಕರೆ ತರಲಾಗುತ್ತಾ ಇತ್ತು. ಕರ್ನಾಟಕ- ಕೇರಳ ಗಡಿ ಭಾಗದ ತಲಪಾಡಿಯ ಅಲಂಕಾರು ಗುಡ್ಡದಲ್ಲಿ ಈ ಘಟನೆ ನಡೆದಿದೆ. ದರೋಡೆಯ ಪ್ರಮುಖ ಆರೋಪಿ ಕಣ್ಣನ್ ಮಣಿ ಯನ್ನು ದೇರಳಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೋಟೆಕಾರು ಬ್ಯಾಂಕ್ ಲೂಟಿ ಮಾಡಿದವರು ತಮಿಳುನಾಡಿನವರೇ ಆದರೂ, ಇವರೆಲ್ಲಾ ಮುಂಬೈನ ನಟೋರಿಯಸ್ ಧಾರಾವಿ ಗ್ಯಾಂಗ್‌ನವರು. ಕೋಟೆಕಾರ್ ಬ್ಯಾಂಕ್ ದರೋಡೆಯ ಕಿಂಗ್ ಪಿನ್ ಮುರುಗನ್ ದರೋಡೆಯ ಕಂಪ್ಲೀಟ್ ಪ್ಲ್ಯಾನ್ ಸಿದ್ಧಪಡಿಸಿದ್ದೇ ಮುರುಗನ್, ಧಾರಾವಿಯಲ್ಲಿ ಆಕ್ಟೀವ್ ಆಗಿದ್ದ ಮೊಸ್ಟ್ ಡೇಂಜರಸ್ ಗ್ಯಾಂಗ್, ಈ ಹಿಂದೆಯೂ ಹಲವು ದರೋಡೆ ನಡೆಸಿ ಪಳಗಿದೆ.