ಬ್ಯಾಂಕ್ ದರೋಡೆ ಬೆನ್ನಲ್ಲೇ ರಾಜ್ಯದಲ್ಲಿ ಭಯಾನಕ ರೋಡ್ ರಾಬರಿ
2 ಕಾರಿನಲ್ಲಿ ಬಂದಿದ್ದ 4 ಮುಸುಕುಧಾರಿಗಳಿಂದ ಲೈವ್ ಅಟ್ಯಾಕ್
ಹಣ ಹಾಗೂ ಕಾರನ್ನು ತೆಗೆದುಕೊಂಡು ಎಸ್ಕೇಪ್ ಆದ ಆಗಂತುಕರು
ಮೈಸೂರು: ಬೀದರ್ ಎಟಿಎಂ ಹಣ, ಮಂಗಳೂರು ಬ್ಯಾಂಕ್ ದರೋಡೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ರಾಬರಿ ನಡೆದಿದೆ. ಈ ಬಾರಿ ದರೋಡೆಕೋರರು ಹಾಡಹಗಲೇ ರಸ್ತೆಗೆ ಇಳಿದಿದ್ದು, ಇನ್ನೋವಾ ಕಾರು ಅಡ್ಡಗಟ್ಟಿ ಹಣ, ಕಾರಿನ ಸಮೇತ ಪರಾರಿ ಆಗಿದ್ದಾರೆ.

ಮೈಸೂರು ಜಿಲ್ಲೆ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಈ ಭಯಾನಕ ಘಟನೆ ನಡೆದಿದೆ. 2 ಕಾರಿನಲ್ಲಿ ಬಂದಿದ್ದ 4 ಮುಸುಕುಧಾರಿಗಳು ಇನ್ನೋವಾ ಕಾರನ್ನು ಅಡ್ಡಗಟ್ಟಿದ್ದಾರೆ. ದಾಳಿ ಮಾಡಿದ ಮುಸುಕುಧಾರಿಗಳು ಜೇಬಿನಲ್ಲಿದ್ದ ಹಣ ಹಾಗೂ ಆ ವ್ಯಕ್ತಿಯ ಕಾರನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ.

ಮೈಸೂರಿನಲ್ಲಿ ಇನ್ನೋವಾ ಕಾರು ಅಡ್ಡಗಟ್ಟಿ ಹಣ ಕಸಿದುಕೊಂಡು ಹೋದ ದೃಶ್ಯ ಸೆರೆಯಾಗಿದೆ. ದೃಶ್ಯದಲ್ಲಿ 4 ಮುಸುಕುಧಾರಿಗಳು ಇನ್ನೋವಾ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಕಾರಿನಲ್ಲಿದ್ದವರ ಕಣ್ಣಿಗೆ ಸ್ಪ್ರೇ ಮಾಡಿ ಕಾರು ಕಿತ್ತುಕೊಂಡು ಪರಾರಿ ಆಗಿದ್ದಾರೆ.

ಕಾರಿನಲ್ಲಿ ಇದ್ದವರು ಹೇಳಿದ್ದೇನು?
ಕೇರಳ ಮೂಲದ ಸೂಫಿ ಮತ್ತು ಅಶ್ರಫ್ ಎಂಬುವವರು ಮೈಸೂರಿಗೆ ಬಂದಿದ್ದರು. ಕೇರಳದ ಕೋಯಿಕೋಡಿನಿಂದ ಈ ಇಬ್ಬರು ಮೈಸೂರಿಗೆ ಜಮೀನು ಖರೀದಿಗೆ ಆಗಮಿಸಿದ್ದು, ಜಮೀನು ನೋಡಿಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಅಪರಿಚಿತರು ಎರಡು ಕಾರಗಳಲ್ಲಿ ಬಂದು ಕಾರು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಜಯಪುರ ಪೊಲೀಸರು ಕೃತ್ಯದ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಫಾರೆನ್ಸಿಕ್ ಲ್ಯಾಬ್ ಸಿಬ್ಬಂದಿ ಗಾಜಿನ ತುಂಡು, ರಕ್ತದ ಕಲೆಯ ಮಾದರಿ ಸಂಗ್ರಹ ಮಾಡಿದ್ದಾರೆ.