ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Jeju Air Flight 2216 ಪತನವಾಗಿ 28 ಪ್ರಯಾಣಿಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ವಿಮಾನ ರನ್‌ವೇಯಿಂದ ಕೆಳಗಿಳಿದು ಸ್ಫೋಟಗೊಂಡಿದ್ದು, ಒಟ್ಟು 181 ಜನರಿದ್ದ ವಿಮಾನದಲ್ಲಿ ಉಳಿದವರ ಭವಿಷ್ಯ ತಿಳಿದುಬಂದಿಲ್ಲ
ದಕ್ಷಿಣ ಕೊರಿಯಾ: ಅಜರ್‌ಬೈಜಾನ್ ಘಟನೆ ಮಾಸುವ ಮುನ್ನವೇ ಮತ್ತೊಂದು ವಿಮಾನ Jeju Air Flight 2216 ಪತನವಾಗಿದ್ದು, ಸುಮಾರು 28 ಪ್ರಯಾಣಿಕರು ಮೃತರಾಗಿರುವ ಬಗ್ಗೆ ವರದಿಯಾಗಿದೆ. ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರಂತ ಸಂಭವಿಸಿದ್ದು, ಪ್ಲೇನ್ ರನ್‌ವೇಯಿಂದ ಕೆಳಗಿಳಿದು ಸ್ಫೋಟವಾಗುವ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ. ಈ ಸ್ಪೋಟದ ಪರಿಣಾಮ 28 ಪ್ರಯಾಣಿಕರು ಮೃತರಾಗಿದ್ದಾರೆ ಎಂದು ಹೇಳಲಾಗಿದೆ.

https://x.com/i/status/1873173725446848734
ಪತನಕ್ಕೊಳಗಾದ ವಿಮಾನದಲ್ಲಿ 175 ಪ್ರಯಾಣಿಕರು, ಮತ್ತು 6 ಸಿಬ್ಬಂದಿ ಇದ್ದರು ಎಂದು ಯೋನ್ಹಾಫ್ ವರದಿ ಮಾಡಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವಿಮಾನ ಪತನ ಮತ್ತು ರನ್‌ವೇಯಿಂದ ಕೆಳಗೆ ಇಳಿದು ಕಾಕ್‌ಪಿಟ್ ಸ್ಪೋಟಗೊಂಡಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಯಾಣಿಕನೋರ್ವ ಹೊರಗೆ ಬರುತ್ತಿರೋದನ್ನು ಗಮನಿಸಬಹುದು. ಮುವಾನ ಕಾಲಮಾನದ ಪ್ರಕಾರ ಬೆಳಗ್ಗೆ 9.0ಕ್ಕೆ ಈ ಘಟನೆ ಸಂಭವಿಸಿದೆ

ಮುವಾನ್ ವಿಮಾನನಿಲ್ದಾಣ ದಕ್ಷಿಣ ಕೊರಿಯಾದ ಜಿಯೊಲ್ಲಾ ಪ್ರಾಂತ್ಯದ ಕರಾವಳಿ ಭಾಗದಲ್ಲಿದೆ. ವಿಮಾನ ಪತನವಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಏರ್‌ಪೋರ್ಟ್‌ನಲ್ಲಿ ನಡೆದ ದುರಂತ ಇದಾಗಿದೆ. ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸ ನಡೆಯುತ್ತಿದ್ದು, ಸದ್ಯ ಮುವಾನ್ ಏರ್‌ಪೋರ್ಟ್ ಎಲ್ಲಾ ವಿಮಾನಗಳ ಕಾರ್ಯಚರಣೆಯನ್ನು ತಾತ್ಕಲಿಕವಾಗಿ ತಡೆ ಹಿಡಿಯಲಾಗಿದೆ ಎನ್ನಲಾಗಿದೆ. ವಿಮಾನ ಬ್ಯಾಂಕಾಕ್‌ನಿಂದ ಮುವಾನ್‌ಗೆ ಬಂದಿತ್ತು.
