
ಪರ್ಕಳ: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋದಿಸಿ ಉಡುಪಿಯ ಪರ್ಕಳದಲ್ಲಿ ಪ್ರತಿಭಟನೆ ನಡೆಯಿತು.
ಪರ್ಕಳದ ಬಾಬು ರಾಯ ಸರ್ಕಲ್ ಬಳಿ ಟ್ರ್ಯಾಕ್ಟರ್ ಬಳಸಿ ಪರ್ಕಳ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕಿಸಾನ್ ಘಟಕ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದರು
72ನೇ ಗಣತಂತ್ರ ದಿವಸದ ಅಂಗವಾಗಿ ಸ್ಥಳೀಯ ಕೃಷಿಕರೂ ಆದ ಹಿರಿಯ ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ ಶೆಟ್ಟಿಬೆಟ್ಟು ಅವರು ದೀಪ ಬೆಳಗಿಸಿ ಪ್ರತಿಭಟನೆಗೆ ಚಾಲನೆ ನೀಡಿದರು.
ಈ ಸಂದರ್ಭ ಕಾಂಗ್ರೆಸ್ ನ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಎಲ್ಲೂರು ಶಶಿಧರ ಶೆಟ್ಟಿ ಕೃಷಿ ಕಾಯಿದೆಗಳ ರದ್ದತಿ ಯಾಕೆ ಆಗಬೇಕು ಮತ್ತು ಕಾಯಿದೆಯ ಸಾಧಕ- ಬಾಧಕ ವಿವರಿಸಿದರು.
ಕಾರ್ಯಕ್ರಮವನ್ನು ಗಣೇಶ್ ರಾಜ್ ಸರಳಬೆಟ್ಟು ಸಂಘಟಿಸಿ ಸ್ವಾಗತಿಸಿ, ವಂದಿಸಿದರು. ಬ್ರಹ್ಮಾವರ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಕೀಳಂಜೆ, ಜಯ ಶೆಟ್ಟಿ ಬನ್ನಂಜೆ, ಮೋಹನದಾಸ್ ನಾಯಕ್ ಪರ್ಕಳ, ಉಪೇಂದ್ರ ನಾಯ್ಕ್ , ತುಳಜಾ, ಮತ್ತಿತರರು ಉಪಸ್ಥಿತರಿದ್ದರು