ಮುಂಬಯಿ: ಮಾಹಾರಾಷ್ಟ್ರ ಚುನಾವಣೆಯಲ್ಲಿ ವರ್ಸೋವಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಬಿಗ್‌ಬಾಸ್ ಖ್ಯಾತಿಯ ನಟ ಅಜಾಜ್ ಖಾನ್ ಭಾರೀ ಅಂತರದಲ್ಲಿ ಹೀನಾಯ ಸೋಲುಂಡು ಭಾರೀ ಸುದ್ದಿಯಾಗಿದ್ದಾರೆ.

ಆಜಾದ್ ಸಮಾಜ್ ಪಕ್ಷ (ಕಾನ್ಶಿರಾಮ್)ದಿಂದ ಕಣಕ್ಕಿಳಿದಿದ್ದ ಅಜಾಜ್ ಕೇವಲ 155 ಮತ ಗಳಿಸಿದ್ದಾರೆ. ಈ ಮತ ಗಳಿಕೆಯು ಕ್ಷೇತ್ರದಲ್ಲಿ ಚಲಾ ವಣೆಯಾದ ನೋಟಾ ಮತಗಳಿಗಿಂತಲೂ ಕಡಿಮೆ. 1,298 ಮಂದಿ ನೋಟಾಗೆ ಮತ ಚಲಾಯಿಸಿದ್ದಾರೆ. ವಿಶೇಷವೆಂದರೆ ಅಜಾಜ್ ಅವರಿಗೆ ಇನ್ ಸ್ಟಾಗ್ರಾಂನಲ್ಲಿ 56 ಲಕ್ಷ ಮಂದಿ ಹಿಂಬಾಲಕರಿದ್ದಾರೆ
ಸಾಮಾಜಿಕ ತಾಣದಲ್ಲಿ ಎಷ್ಟೇ ಲಕ್ಷ ಬೆಂಬಲಿಗರಿದ್ದರೂ ಮತಗಳಾಗಿ ಪರಿವರ್ತಿಸುವುದು ಅಷ್ಟು ಸುಲಭವಲ್ಲ ಎನ್ನುವುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ

ಸಲ್ಮಾನ್ ಖಾನ್ ನಿರೂಪಣೆ ಮಾಡುವ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 7 ರಲ್ಲಿ ಅಜಾಜ್ ಖಾನ್ ಹೆಸರು ಮಾಡಿದ್ದರು. ಫಿಯರ್ ಫ್ಯಾಕ್ಟರ್, ಕಾಮಿಡಿ ನೈಟ್ಸ್ ವಿತ್ ಕಪಿಲ್, ಕಾಮಿಡಿ ಕ್ಲಾಸಸ್ ಮತ್ತು ಕಾಮಿಡಿ ನೈಟ್ಸ್ ಬಚಾವೋ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು ಹಲವಾರು ಸಂಗೀತ ವಿಡಿಯೋಗಳೊಂದಿಗೆ ತೆಲುಗು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ನಟನೆ ಮಾಡಿದ್ದಾರೆ.
ಇನ್ಸ್ಟಾದಲ್ಲಿ ಕೇವಲ ಮಹಾರಾಷ್ಟ್ರದವರು ಮಾತ್ರ ಇರೋದ? 🤣🤣🤣🤭