
ಚನ್ನಪಟ್ಟಣ ಉಪಚುನಾವಣೆಯ ರಿಸಲ್ಟ್ ಕ್ಷಣ, ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ. ಆರಂಭದಿಂದಲೂ ಹಾವು-ಏಣಿ ಫಲಿತಾಂಶ ಹೊರ ಬೀಳುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಹಾಗೂ ಸಿ.ಪಿ ಯೋಗೇಶ್ವರ್ ಅವರ ರಾಜಕೀಯ ಭವಿಷ್ಯ ರಣ ರೋಚಕವಾಗಿದೆ.
ಕ್ಷಣ, ಕ್ಷಣಕ್ಕೂ ಟ್ವಿಸ್ಟ್!
ಚನ್ನಪಟ್ಟಣದ ಮತಎಣಿಕೆಯ ಅಂಚೆ ಮತದಾನದಲ್ಲಿ ಸಿ.ಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಮಬಲ ಕಾಯ್ದುಕೊಂಡಿದ್ದರು. ಆದರೆ ಮೊದಲನೇ ಸುತ್ತಿನ ಮುಕ್ತಾಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರು ಆಮೇಲೆ ಸತತ 3-4 ಸುತ್ತಿನಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮುನ್ನಡೆ ಸಾಧಿಸುತ್ತಾ ಕುತೂಹಲಕ್ಕೆ ಕಾರಣವಾಗಿದೆ.

6ನೇ ಸುತ್ತಿನಲ್ಲಿ ನಿಖಿಲ್ ಮುನ್ನಡೆ!
NDA – ನಿಖಿಲ್ ಕುಮಾರಸ್ವಾಮಿ – 30,674 – ಮುನ್ನಡೆ
ಕಾಂಗ್ರೆಸ್ – ಸಿ.ಪಿ. ಯೋಗೇಶ್ವರ್ – 29,891 – ಹಿನ್ನಡೆ
ಜೆಡಿಎಸ್ – 783 ಮತಗಳ ಮುನ್ನಡೆ

7ನೇ ಸುತ್ತಿನಲ್ಲಿ ಯೋಗೇಶ್ವರ್ ಮುನ್ನಡೆ
ಚನ್ನಪಟ್ಟಣ ಉಪಚುನಾವಣೆಯ 7ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಮುನ್ನಡೆ ಸಾಧಿಸಿದ್ದಾರೆ. 3,663 ಮತಗಳ ಭಾರೀ ಮುನ್ನಡೆ ಸಾಧಿಸಿರುವ ಯೋಗೇಶ್ವರ್ ಅವರು ನಿಖಿಲ್ ಕುಮಾರಸ್ವಾಮಿಯನ್ನು ಹಿಂದಿಕ್ಕಿದ್ದಾರೆ.

ಹೆಚ್.ಡಿ ದೇವೇಗೌಡರಿಗೂ ಟೆನ್ಷನ್!
ಇಂದಿನ ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಮೇಲೆ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯ ನಿಂತಿದೆ. ಹೀಗಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಚನ್ನಪಟ್ಟಣದ ರಿಸಲ್ಟ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿರುವ ಹೆಚ್‌ಡಿಡಿ ಫೋನ್‌ನಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕೂಡ ಹೆಚ್.ಡಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
