ಟೆಹ್ರಾನ್: ಇರಾನ್ ದಾಳಿಗೆ ಇಸ್ರೇಲ್ ಮುಂದಾಗಿದ್ದು ಅದರಂತೆ ಇಂದು(ಅ. 26) ರಂದು ಮುಂಜಾನೆ ಇರಾನ್ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಆರಂಭಿಸಿದೆ.

ಇಂದು ಬೆಳಿಗ್ಗೆ ಇರಾನ್ನ ಟೆಹರಾನ್ ಸೇರಿದಂತೆ ಹಲವು ಪ್ರದೇಶಗಳಲ್ಲಿರುವ ಸೇನಾ ನೆಲಗಳನ್ನು ಗುರಿಯಾಗಿಸಿ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ.ತಿಂಗಳ ಆರಂಭದಲ್ಲಿ ಇರಾನ್ ಇಸ್ರೇಲ್ ಮೇಲೆ 200ಕ್ಕೂ ಅಧಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿತ್ತು ಈ ವೇಳೆ ಹಲವರು ಮೃತಪಟ್ಟಿದ್ದರು. ಇದಾದ ಬಳಿಕ ಇಸ್ರೇಲ್ ಅಧ್ಯಕ್ಷರ ಸಮ್ಮುಖದಲ್ಲಿ ದಾಳಿಯ ಕುರಿತು ಸೇನಾ ಮುಖಂಡರ ಜೊತೆ ಗುಪ್ತ ಸಭಯನ್ನು ನಡೆಸಲಾಯಿತು, ಇದರ ಬೆನ್ನಿಗೆ ಇರಾನ್ ಮೇಲೆ ದಾಳಿಗೆ ಇಸ್ರೇಲ್ ಮುಂದಾಗಿದೆ.

https://x.com/ISefati/status/1619504728412663814?t=3_HzOddftR_omor8H-Drlw&s=19

https://x.com/lovem_111/status/1850019055056363535?t=Vm40avLAcSvQ0LbT2a62tg&s=19