ಹಮಾಸ್ ಮುಖ್ಯಸ್ಥ ಸಿನ್ವಾರ್ ಹತ್ಯೆ ಪ್ರತೀಕಾರಕ್ಕೆ ಮುಂದಾದ ಹಿಜ್ಬುಲ್ಲಾ
ಜೆರುಸಲೇಂ: ಹಮಾಸ್ (Hamas) ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆ ಪ್ರತೀಕಾರಕ್ಕೆ ಮುಂದಾಗಿರುವ ಹಿಜ್ಬುಲ್ಲಾ (Hezbollah), ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ನಿವಾಸದ ಮೇಲೆ ಡ್ರೋನ್ ದಾಳಿ ನಡೆಸಿದೆ.

ನೆತನ್ಯಾಹು (Benjamain Netanyahu) ಖಾಸಗಿ ನಿವಾಸದ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ ನಡೆಸಿದೆ. ಖಾಸಗಿ ನಿವಾಸದ ದೂರದಲ್ಲಿ ಡ್ರೋನ್ ಸ್ಫೋಟಗೊಂಡಿದೆ. ಆ ಮೂಲಕ ಇಸ್ರೇಲ್ ಅಧ್ಯಕ್ಷನ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ. ಅಧ್ಯಕ್ಷರ ನಿವಾಸಕ್ಕೆ ಯಾವುದೇ ಹಾನಿಯಾಗಿಲ್ಲ. ಸ್ಥಳಕ್ಕೆ ಮಾಧ್ಯಮದ ಸಂಸ್ಥೆ ಗಳಿಗೆ ನಿರ್ಬಂಧ ಹೇರಲಾಗಿದೆ
ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆಯ ಬೆನ್ನಲ್ಲೇ ಶನಿವಾರ ಇಸ್ರೇಲ್‌ನ ಸಿಸೇರಿಯಾ ಪಟ್ಟಣದಲ್ಲಿರುವ ನೆತನ್ಯಾಹು ನಿವಾಸದ ಕಡೆಗೆ ಡ್ರೋನ್ ಹಾರಿಸಲಾಯಿತು. ಲೆಬನಾನ್‌ನಿಂದ ಡ್ರೋನ್ ಉಡಾವಣೆ ಮಾಡಲಾಗಿದ್ದು, ಅದು ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಇಸ್ರೇಲ್ ಭೂಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದ ಇನ್ನೂ ಎರಡು ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಮಿಲಿಟರಿ ತಿಳಿಸಿದೆ

ಲೆಬನಾನ್‌ನಿಂದ ಲಾಂಚ್ ಆಗಿದ್ದ ಡ್ರೋನ್ ಅನ್ನು ಇಸ್ರೇಲಿ ಮಿಲಿಟರಿ ಬೆನ್ನಟ್ಟಿತು. ಆದರೂ ಅದರನ್ನು ತಡೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಇಸ್ರೇಲ್ ಅಧ್ಯಕ್ಷ ನಿವಾಸದ ಬಳಿ ಡ್ರೋನ್ ಸ್ಫೋಟಗೊಂಡಿದೆ