ಟೆಹರಾನ್: “ಇನ್ನು ಹೆಚ್ಚು ದಿನ ಇಸ್ರೇಲ್ ಉಳಿ ಯುವುದಿಲ್ಲ’ ಎಂಬ ಕಠಿನ ಸಂದೇಶವನ್ನು ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ನೀಡಿದ್ದಾರೆ. 5 ವರ್ಷಗಳಲ್ಲಿಯೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಶುಕ್ರವಾರ ಟೆಹರಾನ್ನ ಮಸೀದಿ ಯಲ್ಲಿ ಸಾಮೂಹಿಕ ಪ್ರಾರ್ಥನೆಯಾಗಿ ಭಾಗಿಯಾದ ಬಳಿಕ ಅವರು ಮಾತನಾಡಿದರು.

ಖಮೇನಿ, ಇಸ್ರೇಲ್ ವಿರುದ್ಧ ಪ್ಯಾಲೆಸ್ತೀನಿಯರು ಮತ್ತು ಲೆಬನಾನಿಗರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಜತೆಗೆ ಇತ್ತೀಚೆಗೆ ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು “ಸಾರ್ವಜನಿಕ ಸೇವೆ’ ಎಂದೂ ಬಣ್ಣಿಸಿದರು. ಹಮಾಸ್ ಅಥವಾ ಹೆಜ್ಬುಲ್ಲಾ ವಿರುದ್ಧ ಇಸ್ರೇಲ್ ಹೆಚ್ಚು ಬಾಳಿಕೆ ಬರಲ್ಲ ಎಂದು ಖಮೇನಿ ಹೇಳುತ್ತಿದ್ದಂತೆ, ಮಸೀದಿಯ ಆವರಣದಲ್ಲಿ ಸೇರಿದ್ದ ಸಾವಿರಾರು ಜನರು “ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಘೋಷಣೆ ಮೊಳಗಿಸಿದರು.

ಐತಿಹಾಸಿಕ ಇಮಾಮ್ ಖೊಮೇನಿ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಸಾವಿರಾರು ಇರಾನಿಯನ್ನರನ್ನು ಉದ್ದೇಶಿಸಿ ಮಾತನಾಡಿದ ಖಮೇನಿ ಅವರು ರಷ್ಯಾ ನಿರ್ಮಿತ ಡ್ರಾಗುನೋವ್ ರೈಫಲ್ ಹಿಡಿದಿದ್ದರು.ಪ್ರತಿಭಟನೆ ನಡೆಸುತ್ತಿರುವ ಲೆಬನಾನ್ ಮತ್ತು ಪ್ಯಾಲೆಸ್ತೀನಿಯರ ಬಗ್ಗೆ ಆಕ್ಷೇಪಿಸಲು ಯಾವುದೇ ಅಂತಾರಾಷ್ಟ್ರೀಯ ಕಾನೂನುಗಳಿಗೆ ಅವಕಾಶವಿಲ್ಲ ಎಂದರು. ಭಾಷಣದಲ್ಲಿ ಖಮೇನಿ ಇತ್ತೀಚೆಗೆ ಇಸ್ರೇಲ್ ದಾಳಿಗೆ ಮೃತ ಹೆಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾರನ್ನೂ ಹಾಡಿ ಹೊಗಳಿದರು. ವಿಶೇಷವೆಂದರೆ, ಈ ಭಾಷಣದ ವೇಳೆ ಖಮೇನಿ ಅವರು ತಮ್ಮ ಪಕ್ಕದಲ್ಲೇ ಗನ್ವೊಂದನ್ನು ಇರಿಸಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು.

ಖಮೇನಿ ಭಾಷಣ ಅಂತ್ಯ ಆಗುತ್ತಿದ್ದಂತೆ ಹೆಜ್ಬುಲ್ಲಾ ದಾಳಿ
Advertisementಟೆಹರಾನ್: ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಸುಮಾರು 5 ವರ್ಷಗಳ ಅಯತೊಲ್ಲಾ ಅಲಿ ಖಮೇನಿ ಸಾರ್ವಜನಿಕವಾಗಿ ಶುಕ್ರವಾರ ಮಾತನಾಡಿದರು. ಅವರ ಭಾಷಣ ಪೂರ್ಣಗೊಳ್ಳುತ್ತಿದ್ದಂತೆ ಉತ್ತರ ಇಸ್ರೇಲ್ ಮೇಲೆ ಹೆಜ್ಬುಲ್ಲಾ ಬಂಡುಕೋರರು ದಾಳಿ ನಡೆಸಿದ್ದಾರೆಂದು ವರದಿಯಾಗಿದೆ.
ಹೌತಿ ಬಂಡುಕೋರರ ಮೇಲೆ ಅಮೆರಿಕ ದಾಳಿ?
ಸನಾ: ಯೆಮೆನ್ನಲ್ಲಿ ಹೌತಿ ಬಂಡುಕೋರರ ನಿಯಂತ್ರಣದಲ್ಲಿರುವ 3 ನಗರಗಳ ಮೇಲೆ ಅಮೆರಿಕ ದಾಳಿ ಮಾಡಿದೆ ಎಂದು ಯೆಮೆನ್ನ ಮಾಧ್ಯ ಮಗಳು ವರದಿ ಮಾಡಿವೆ. ರಾಜಧಾನಿ ಸನಾ, ಹೊದೈದಾ, ದಕ್ಷಿಣದ ಧಮಾರ್ ನಗರವನ್ನೂ ಗುರಿಯಾಗಿಸಿ ಹಲವಾರು ಬಾರಿ ಅಮೆರಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಇಸ್ರೇಲ್ ಪಡೆ ಮೇಲೆ ಲೆಬನಾನ್ ಸೇನೆ ದಾಳಿ
ಇದೇ ಮೊದಲ ಬಾರಿಗೆ ಲೆಬನಾನ್ ಸೇನಾ ಪಡೆಗಳು ಇಸ್ರೇಲಿ ಸೇನೆ ಮೇಲೆ ದಾಳಿ ನಡೆಸಿವೆ. ದಕ್ಷಿಣ ಲೆಬ ನಾನ್ನಲ್ಲಿರುವ ಪಡೆಗಳ ವಿರುದ್ಧ ಕಾರ್ಯಾ ಚರಣೆಯನ್ನು ಕೈಗೊಂಡಿವೆ. ಒಳ ನುಗ್ಗಿರುವ ವಿರುದ್ಧ ಇಸ್ರೇಲ್ ಪಡೆಗಳ ವಿರುದ್ಧ ದಾಳಿಗಳು ನಡೆದಿವೆ ಎಂದು ಹೆಜ್ಬುಲ್ಲಾ ಹೇಳಿಕೊಂಡಿದೆ. ಪ್ರತ್ಯೇಕ ಘಟನೆ ಗಳಲ್ಲಿ 12ಕ್ಕೂ ಹೆಚ್ಚು ತಮ್ಮ ಯೋಧರು ಮೃತಪಟ್ಟ ಹಿನ್ನೆಲೆಯಲ್ಲಿ ಲೆಬನಾನ್ ಸೇನೆ ಈ ದಾಳಿ ನಡೆಸಿದೆ.
2 ತಿಂಗಳ ಬಳಿಕ ಇಸ್ರೇಲ್ ಮೇಲೆ ಹಮಾಸ್ ದಾಳಿ
ಶುಕ್ರವಾರ ಗಾಜಾ ಪಟ್ಟಿಯಿಂದ 2 ರಾಕೆಟ್ ದಾಳಿ ನಡೆದಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಸುಮಾರು 2 ತಿಂಗಳ ಬಳಿಕ ಗಾಜಾ ಪಟ್ಟಿಯಿಂದ ಈ ದಾಳಿ ನಡೆದಿದೆ. ದಾಳಿ ನಡೆಯುತ್ತಿದ್ದಂತೆ ಗಾಜಾ ಪಟ್ಟಿಯ ಬಳಿ ಇರುವ ಕಿಸ್ಸು ಫುಮ್, ಹಶ್ಲೋಶಾ ಪ್ರದೇಶಲ್ಲಿ ಸೈರನ್ ಮೊಳಗಿಸಲಾಯಿತು. ಆದರೆ, ಸಾವು ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ.