ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೋಳಿಯಾರ್ ಗ್ರಾಮ ಸಮಿತಿಯ ಆಂತರಿಕ ಚುನಾವಣೆ ದಿನಾಂಕ 02/08/2024 ರಂದು ಪಕ್ಷದ ಕಛೇರಿಯಲ್ಲಿ ಗ್ರಾಮ ಸಮಿತಿ ಉಪಾಧ್ಯಕ್ಷರಾದ ಸವಾದ್ ರಂತಡ್ಕ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಗ್ರಾಮ ಸಮಿತಿ ಕಾರ್ಯದರ್ಶಿಯಾದ ಕಬೀರ್ ರಂತಡ್ಕ ಕಳೆದ ಸಾಲಿನ ವರದಿಯನ್ನು ಸಭೆಯಲ್ಲಿ ಮಂಡಿಸಿದರು.

ನಂತರ ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ ಆಸೀಫ್ ಪಾವೂರ್ ಮತ್ತು ಕಮರ್ ಮಲಾರ್ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
2024-27 ರ ಅವಧಿಗೆ ಬೋಳಿಯಾರ್ ಗ್ರಾಮ ಸಮಿತಿಗೆ ನೂತನ ಅಧ್ಯಕ್ಷರಾಗಿ ಹನೀಫ್ ರಂತಡ್ಕ ಕಾರ್ಯದರ್ಶಿಯಾಗಿ ಕಬೀರ್ ರಂತಡ್ಕ , ಉಪಾಧ್ಯಕ್ಷರಾಗಿ ಶರೀಫ್. ಎಚ್ . ಕೋಶಾಧಿಕಾರಿಯಾಗಿ ಇಕ್ಬಾಲ್. BH ಹಾಗು ಸಮಿತಿ ಸದಸ್ಯರಾಗಿ ಆರೀಫ್ ಕಾಪಿಕಾಡ್ ಮತ್ತು ರಹಿಮಾನ್ ಬೋಳಿಯಾರ್ ಆಯ್ಕೆಯಾದರು.


ನೂತನ ಅಧ್ಯಕ್ಷರಾದ ಹನೀಫ್ ರಂತಡ್ಕ ಸಭೆ ಉದ್ದೇಶಿಸಿ ಮಾತನಾಡಿದರು. ಇಕ್ಬಾಲ್ bh ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನ ಸಭಾ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಹಾಗೂ 2024-27 ಸಾಲಿನ ಬೂತ್ ಪದಾಧಿಕಾರಿಗಳು ಮತ್ತು ವಾರ್ಡ್ ಕೌನ್ಸಿಲರ್ ಗಳು ಹಾಜರಿದ್ದರು ಮುನ್ನೂರು ಬ್ಲಾಕ್ ಕಾರ್ಯದರ್ಶಿ ರಹಿಮಾನ್ ಬೋಳಿಯಾರ್ ಕಾರ್ಯಕ್ರಮ ನಿರೂಪಿಸಿದರು.
