ರಾಂಚಿ: ಜಾರ್ಖಂಡ್ನ ಬಾರಾ ಬಂಬು (Bara Bambu) ಗ್ರಾಮದಲ್ಲಿ ಪ್ರಯಾಣಿಕರಿದ್ದ ಟ್ರೈನ್ ಹಳಿ ತಪ್ಪಿ ಭಾರೀ ಅನಾಹುತ ಸಂಭವಿಸಿದೆ. ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಮುಂಜಾನೆ 3.45ರ ಸುಮಾರಿಗೆ Mumbai-Howrah ಟ್ರೈನ್ ಅಪಘಾತಕ್ಕೆ ಒಳಗಾಗಿದೆ.

ಹೌರಾ-CSMT ಎಕ್ಸ್‌ಪ್ರೆಸ್ 18 ಬೋಗಿಗಳು ಜಮ್ಶೆಡ್‌ಪುರದಿಂದ ಸುಮಾರು 80 ಕಿಮೀ ದೂರದಲ್ಲಿ ಹಳಿತಪ್ಪಿದೆ. ಹಳಿತಪ್ಪಿದ 18 ಬೋಗಿಗಳಲ್ಲಿ 16 ಪ್ಯಾಸೆಂಜರ್ ಬೋಗಿಗಳು, ಒಂದು ಪವರ್ ಕಾರ್ ಕೋಚ್ಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳಿ ತಪ್ಪಿದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿ ಕಾರ್ಯಾಚರಣೆ ನಡೆಸ್ತಿದ್ದಾರೆ. ಹೀಗಾಗಿ ಭಾರತೀಯ ರೈಲ್ವೇ ಕೂಡ ಪ್ರಯಾಣಿಕರಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆ ತೆರೆದಿದೆ.

ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯ ವೈದ್ಯಕೀಯ ತಂಡ ಪ್ರಥಮ ಚಿಕಿತ್ಸೆ ನೀಡುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಚಕ್ರಧರಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ಪ್ರಯಾಣಿಕರಿದ್ದ ಪಕ್ಕದಲ್ಲೇ ಗೂಡ್ಸ್ ರೈಲು ಕೂಡ ಹಳಿತಪ್ಪಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿ ಓಂ ಪ್ರಕಾಶ್ ಚರಣ್ ಹೇಳಿದ್ದಾರೆ. ಏಕಕಾಲಕ್ಕೆ ಎರಡು ರೈಲುಗಳ ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.


