ಎಟ್ಟಿಕುಳಂ: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನರಾಗಿದ್ದಾರೆ. ಕೇರಳದ ಎಟ್ಟಿಕುಳಂನಲ್ಲಿರುವ ಮನೆಯಲ್ಲಿ ಅವರು ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ
ಉಳ್ಳಾಲ ತಂಙಳ್ ಎಂದೇ ಪ್ರಸಿದ್ಧರಾದ ತಾಜುಲ್ ಉಲಮಾ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅವರ ಪುತ್ರರೂ ಆಗಿರುವ ಅಸೈಯದ್ ಫಝಲ್ ಕೋಯಮ್ಮ ತಂಙಲ್ ಪ್ರಸ್ತುತ ಉಳ್ಳಾಲ ಖಾಝಿಯಾಗಿದ್ದರು.

ಇಂದು ಅಪರಾಹ್ನ ಉಳ್ಳಾಲ ಸೈಯದ್ ಮದನಿ ದರ್ಗಾ ವಠಾರದಲ್ಲಿ ಅವರು ಭಾಗವಹಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಸೈಯದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳ ನೂತನ ಹಾಸ್ಟೆಲ್ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರು.

ಮನೆಯಲ್ಲಿರುವ ವೇಳೆ ಫಝಲ್ ಕೋಯಮ್ಮ ತಂಙಲ್ ಹೃದಯಸ್ತಂಭನಕ್ಕೀಡಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಈಗ ಕೂರತ್ ತಂಙಳ್‌ರವರ ಜನಾಝ ಎಟ್ಟಿಕ್ಕುಳಂ ಸ್ವಂತ ಮನೆಯಲ್ಲಿದ್ದು, ಸಂಜೆ 5 ಗಂಟೆಗೆ ಶೈಖುನಾ ಸುಲ್ತಾನುಲ್ ಉಲಮಾರ ನೇತೃತ್ವದಲ್ಲಿ ಪುತ್ತೂರಿನ ಕೂರತ್‌ನಲ್ಲಿ ಜನಾಝ ನಮಾಝ್ ನಡೆಯಲಿದೆ

