ತೆಲಂಗಾಣದ ಬಿಆರ್‌ಎಸ್ ಪಕ್ಷದ 6 ವಿಧಾನಪರಿಷತ್ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾದ ಬೆನ್ನಲ್ಲೇ ಶನಿವಾರ ಓರ್ವ ವಿಧಾನಸಭಾ ಸದಸ್ಯ ಕೂಡ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ವಿಪಕ್ಷ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ

ಹೈದರಾಬಾದ್: ತೆಲಂಗಾಣದ ಬಿಆರ್‌ಎಸ್ ಪಕ್ಷದ 6 ವಿಧಾನಪರಿಷತ್ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾದ ಬೆನ್ನಲ್ಲೇ ಶನಿವಾರ ಓರ್ವ ವಿಧಾನಸಭಾ ಸದಸ್ಯ ಕೂಡ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ವಿಪಕ್ಷ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ಈವರೆಗೆ 7 ವಿಧಾನಸಭಾ ಸದಸ್ಯರು ಕೆಸಿಆರ್ ಪಕ್ಷ ತ್ಯಜಿಸಿದಂತಾಗಿದೆ.

ಇದಕ್ಕೂ ಮೊದಲು ಗುರುವಾರ ತಡರಾತ್ರಿ ಬಿಆರ್‌ಎಸ್ ಪಕ್ಷದ 6 ವಿಧಾನ ಪರಿಷತ್ ಸದಸ್ಯರು ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.
ದಂದೆ ವಿಠಲ್, ಭಾನು ಪ್ರಸಾದ್ ರಾವ್, ಎಮ್.ಎಸ್.ಪ್ರಭಾಕರ್, ಬೊಗ್ಗರಪು ದಯಾನಂದ್, ಯೆಗ್ಗೆ ಮಲ್ಲೇಶಮ್, ಬಸವರಾಜು ಸರಯ್ಯ ಪಕ್ಷಾಂತರವಾಗಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಎರಡು ದಿನಗಳ ದೆಹಲಿ ಭೇಟಿಯಿಂದ ಮರಳಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿತ್ತು. ಮುಂದಿನ ದಿನಗಳಲ್ಲಿ ಇನ್ನೂ ಕೆಲವರು ಬಿಆರ್‌ಎಸ್‌ನಿಂದ ಪಕ್ಷಾಂತರವಾಗುವ ಸಾಧ್ಯತೆಯಿದೆ ಎಂದು ಆಗಲೇ ಊಹೆ ಮಾಡಲಾಗಿತ್ತು. ಅದರಂತೆ ನಿನ್ನೆ ಗದ್ವಾಲ್‌ನ ಶಾಸಕ ಕೃಷ್ಣಮೋಹನ್ ರೆಡ್ಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ
