ಬಿಜೆಪಿ ‘ಅಬ್ ಕೀ ಬಾರ್ 400 ಪಾರ್’ನೊಂದಿಗೆ ಆಟವಾಡಿದರು. ಹಲವು ಆಟಗಳಿವೆ, ಮತ್ತು ಚು-ಕಿಟ್-ಕಿಟ್ ಅವುಗಳಲ್ಲಿ ಒಂದು”. ‘400’ ಘೋಷಣೆಯು ‘ಚು’ ಎಂದು ಜೋರಾಗಿ ಪ್ರತಿಧ್ವನಿಸಿತು ಮತ್ತು ‘ಕಿಟ್-ಕಿಟ್’ ನೊಂದಿಗೆ ಕೊನೆಗೊಂಡಿತು ಎಂದ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ. ಚು-ಕಿಟ್-ಕಿಟ್ ಪಶ್ಚಿಮ ಬಂಗಾಳದಲ್ಲಿ ಜನಪ್ರಿಯವಾದ ಆಟವಾಗಿದ್ದು, ಇದನ್ನು ಹಾಪ್‌ಸ್ಕಾಚ್‌ನ ಮಾರ್ಪಡಿಸಿದ ಆವೃತ್ತಿ ಎಂದು ಪರಿಗಣಿಸಲಾಗುತ್ತದೆ

ದೆಹಲಿ ಜುಲೈ 02: ತೃಣಮೂಲ ಕಾಂಗ್ರೆಸ್ (TMC) ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಅವರು ಲೋಕಸಭೆಯಲ್ಲಿ ಯಲ್ಲಿ (Lok Sabha) ಬಿಜೆಪಿ ಘೋಷಣೆಯಾದ ‘ಅಬ್ ಕೀ ಬಾರ್ 400 ಪಾರ್’ ಅನ್ನು ಅಪಹಾಸ್ಯ ಮಾಡಿದ ವಿಡಿಯೊ ಮಂಗಳವಾರ ಜುಲೈ 2 ರಂದು ವೈರಲ್ ಆಗಿದೆ. ಅವರು(ಬಿಜೆಪಿ) ‘ಅಬ್ ಕೀ ಬಾರ್ 400 ಪಾರ್’ನೊಂದಿಗೆ ಆಟವಾಡಿದರು. ಹಲವು ಆಟಗಳಿವೆ, ಮತ್ತು ಚು-ಕಿಟ್-ಕಿಟ್ ಅವುಗಳಲ್ಲಿ ಒಂದು” ಎಂದು ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ. ಆಟವನ್ನು ಉಲ್ಲೇಖಿಸಿದ ಪಶ್ಚಿಮ ಬಂಗಾಳದ ಶ್ರೀರಾಂಪುರ ಕ್ಷೇತ್ರದ ಸಂಸದರು ‘400’ ಘೋಷಣೆಯು ‘ಚು’ ಎಂದು ಜೋರಾಗಿ ಪ್ರತಿಧ್ವನಿಸಿತು ಮತ್ತು ‘ಕಿಟ್-ಕಿಟ್’ ನೊಂದಿಗೆ ಕೊನೆಗೊಂಡಿತು ಎಂದಿದ್ದಾರೆ.

ನೀವು ಕೇವಲ 240 ಸ್ಥಾನಗಳನ್ನು ಗೆದ್ದಿದ್ದೀರಿ ಮತ್ತು ಆ ಪಂದ್ಯವನ್ನು ಕಳೆದುಕೊಂಡಿದ್ದೀರಿ” ಎಂದು ಬ್ಯಾನರ್ಜಿ ಟೀಕಿಸಿದ್ದಾರೆ. ಚು-ಕಿಟ್-ಕಿಟ್ ಪಶ್ಚಿಮ ಬಂಗಾಳದಲ್ಲಿ ಜನಪ್ರಿಯವಾದ ಆಟವಾಗಿದ್ದು, ಇದನ್ನು ಹಾಪ್‌ಸ್ಕಾಚ್‌ನ ಮಾರ್ಪಡಿಸಿದ ಆವೃತ್ತಿ ಎಂದು ಪರಿಗಣಿಸಲಾಗುತ್ತದೆ. ದೊಡ್ಡ ತ್ರಿಕೋನದೊಳಗೆ ಒಂಬತ್ತು ಚೌಕಗಳನ್ನು ರಚಿಸಲಾಗುತ್ತದೆ. ಅಲ್ಲಿ ಆಟಗಾರರು ತಮ್ಮ ಇನ್ನೊಂದು ಕಾಲು ನೆಲವನ್ನು ಮುಟ್ಟದಂತೆ ಕಲ್ಲು ಹೊಡೆಯಬೇಕು
ಆಟಗಾರರು ಜೋರಾಗಿ ‘ಚು’ ಎಂದು ಹೇಳುವ ಮೂಲಕ ಆಟವನ್ನು ಪ್ರಾರಂಭಿಸುತ್ತಾರೆ ಮತ್ತು ‘ಕಿಟ್-ಕಿಟ್’ ಅನ್ನು ನಿಧಾನವಾದ ಧ್ವನಿಯಲ್ಲಿ ಉಚ್ಚರಿಸಲಾಗುತ್ತದೆ.
ಟಿಎಂಸಿ ಸಂಸದ ಬ್ಯಾನರ್ಜಿ ಅವರ ವಿವರಣೆ ಕೇಳಿ ಮಹುವಾ ಮೊಯಿತ್ರಾ ಮತ್ತು ಮೊದಲ ಬಾರಿಗೆ ಸಂಸದರಾದ ಸಯೋನಿ ಘೋಷ್ ಸೇರಿದಂತೆ ಅವರ ಪಕ್ಷದ ಸಂಸದರಲ್ಲಿ ನಗು ತರಿಸಿತು. ಕಲ್ಯಾಣ್ ಬ್ಯಾನರ್ಜಿ ಸಹ ಸಂಸದರನ್ನು ನೋಡುತ್ತಿರುವುದು ಕಂಡುಬಂದಿತು. ಆಗ ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯಪ್ರವೇಶಿಸಿ ಇತ್ತ ಗಮನ ಹರಿಸಿ ಎಂದು ಹೇಳಿದ್ದಾರೆ.
ಇದಕ್ಕೆ ಕಲ್ಯಾಣ್ ಬ್ಯಾನರ್ಜಿ, “ಸರ್, ನಾನು ನಿಮ್ಮನ್ನೇ ನೋಡುತ್ತಿದ್ದೇನೆ. ಈ ಸದನದಲ್ಲಿ ನಿಮಗಿಂತ ಬುದ್ಧಿವಂತರು ಯಾರೂ ಇಲ್ಲ. ನಿಮ್ಮಂತಹ ಸಂಭಾವಿತ ವ್ಯಕ್ತಿ ಇಲ್ಲ.ಎಲ್ಲರೂ ನಿಮ್ಮನ್ನು ಮಾತ್ರ ನೋಡುತ್ತಾರೆ ಎಂದಿದ್ದಾರೆ.

ಡಿಸೆಂಬರ್ 19, 2023 ರಂದು, ಕಲ್ಯಾಣ್ ಬ್ಯಾನರ್ಜಿ ಅವರು ಸಂಸದರ ಅಮಾನತು ವಿರುದ್ಧ ಸಂಸತ್ತಿನ ಮೆಟ್ಟಿಲುಗಳ ಮೇಲೆ ಪ್ರತಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರನ್ನು ಅನುಕರಿಸಿ ಸುದ್ದಿಯಾಗಿದ್ದರು.
