ತೊಕ್ಕೊಟ್ಟು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಬೋಳಿಯಾರ್’ನಲ್ಲಿ ಆರೋಪಿಗಳ ಬಂಧನದ ಹೆಸರಿನಲ್ಲಿ ಪೊಲೀಸ್ ಕಮಿಷನರ್ ಅವರು ರಾತ್ರೊರಾತ್ರಿ ಪೊಲೀಸರನ್ನು ಮನೆಗಳಿಗೆ ಕಳುಹಿಸಿ ಗೂಂಡಾರಂತೆ ವರ್ತಿಸಿದ್ದಾರೆ ಎಂದು ರಿಯಾಜ್ ಕಡ0ಬು ಪ್ರತಿಕ್ರಿಯಿಸಿದ್ದಾರೆ.
ಬೋಳಿಯಾರ್ ಪೊಲೀಸ್ ದೌರ್ಜನ್ಯದ ಘಟನೆಯನ್ನು ವಿರೋಧಿಸಿ ಅವರು ಮಾತನಾಡುತ್ತಿದ್ದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ರಿಯಾಜ್ ಕಡ0ಬು, ನವಾಜ್ ಉಳ್ಳಾಲ್, ಕ್ಷೇತ್ರಾಧ್ಯಕ್ಷ ಬಶೀರ್ ಎಸ್. ಎಮ್, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಪಳ್ನಿರ್, ಬಂಧಿತ ಸಿರಾಜ್ ಪತ್ನಿ ಖೈರುನ್ನೀಸ ಉಪಸ್ಥಿತರಿದ್ದರು

ದ.ಕ ಜಿಲ್ಲೆ ಎಂಬುದು ಪೊಲೀಸ್ ರಾಜ್ಯವಾಗಿ ಪರಿವರ್ತನೆಯಾಗಿದೆ: ಅನ್ವರ್ ಸಾದಾತ್ ಬಜತ್ತೂರು
ತೊಕ್ಕೊಟ್ಟು: ಬೋಳಿಯಾರ್ ಘಟನೆಯನ್ನು ಮುಂದಿಟ್ಟುಕೊಂಡು ಪೊಲೀಸರು ದ.ಕ ಜಿಲ್ಲೆಯನ್ನು ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸಿದ್ದಾರೆ ಎಂದು ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಆರೋಪಿಸಿದ್ದಾರೆ.
ಇತ್ತೀಚಿಗೆ ನಡೆದ ಬೋಳಿಯಾರ್’ನಲ್ಲಿ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ತೊಕ್ಕೊಟ್ಟುವಿನ ಪ್ರೆಸ್ ಕ್ಲಬ್’ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪೋಲೀಸರು ನಡೆಸುತ್ತಿರುವ ಮುಸ್ಲಿಮ್ ಭೇಟೆಯನ್ನು ತರಾಟೆಗೆ ತೆಗೆದುಕೊಂಡರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ರಿಯಾಜ್ ಕಡ0ಬು, ನವಾಜ್ ಉಳ್ಳಾಲ್, ಕ್ಷೇತ್ರಾಧ್ಯಕ್ಷ ಬಶೀರ್ ಎಸ್. ಎಮ್, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಪಳ್ನಿರ್, ಬಂಧಿತ ಸಿರಾಜ್ ಪತ್ನಿ ಖೈರುನ್ನೀಸ ಉಪಸ್ಥಿತರಿದ್ದರು