ದೇಶದಲ್ಲಿ ಸುಮಾರು 12 ಲಕ್ಷ ಎಕರೆ ಜಮೀನು ವಕ್ಪ್ ಆಸ್ತಿಯಿದೆ, ಅದನ್ನು ಬಡವರ ಕೆಲಸಕ್ಕೆ ಉಪಯೋಗಿಸಬೇಕು ಎಂಬ ವಿಜಯಪುರ ನಗರ ಶಾಸಕ ಯತ್ನಾಳ ಹೇಳಿಕೆ ವಿಚಾರ, ‘ ವಕ್ಪ್ ಆಸ್ತಿ 12 ಲಕ್ಷ ಎಕರೆಯಲ್ಲ, 34 ಸಾವಿರ ಎಕರೆ ಇದೆ. ವಕ್ಪ್ ಗೆ ಆಸ್ತಿ ಕೊಟ್ಟಿರೋದು ಯಾರು? ದಾನಿಗಳು ಕೊಟ್ಟಿದ್ದು. ಅದು ಯತ್ನಾಳ್ ಆಸ್ತಿಯೋ, ನಮ್ಮಪ್ಪನ ಆಸ್ತಿಯೋ ಇದ್ದಿದ್ದರೆ ನಾವು ಯಾರಿಗಾದರೂ ಹಂಚಬಹುದಿತ್ತು. ಇದು ಯಾರ ಅಪ್ಪನ ಆಸ್ತಿಯಲ್ಲ. ಇದು ವಕ್ಪ್ ಆಸ್ತಿ ಎಂದು ಕಿಡಿಕಾರಿದರು.

‘ನಮ್ಮಪ್ಪನ ಆಸ್ತಿ ಇದ್ದರೆ ಅದನ್ನ ಯಾರಿಗಾದರೂ ಕೊಡಬಹುದು. ನಾಳೆ ಅವರ ಅಪ್ಪನ ಹತ್ತಿರವಿದ್ದರೆ ಅದನ್ನು ಯಾರಿಗಾದರೂ ಕೊಡಬಹುದು. ದಾನಿಗಳು ಮುಸ್ಲಿಂ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನ ನೀಡಿದ್ದು. ದಾನ ಮಾಡಿದವರು ಯಾವುದಕ್ಕೆ ಉಪಯೋಗ ಮಾಡಬೇಕೆಂಬುದನ್ನು ಕೂಡ ತಿಳಿಸಿರುತ್ತಾರೆ. ಉದಾಹರಣೆಗೆ ಶಿಕ್ಷಣ, ಸ್ಮಶಾನ, ಈದ್ಗಾ, ಮಸೀದಿ ಕಟ್ಟಲು ಉಪಯೋಗಿಸಬೇಕೆಂದು ತಿಳಿಸಿರುತ್ತಾರೆ ಎಂದರು.
