
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20ಕ್ಕೆ ಲೋಕಸಭೆಯಲ್ಲಿ ಬಹುಮತ ಸಾಬೀತು ಮಾಡುವ ಸಾಧ್ಯತೆ ಎಂದು ಹೇಳಲಾಗಿದೆ. ಈಗಾಗಲೇ ಮೋದಿ ನೇತೃತ್ವದಲ್ಲಿ ಎನ್ಡಿಎ ಬೆಂಬಲದೊಂದಿಗೆ ಸರ್ಕಾರ ರಚನೆಯಾಗಿದ್ದು, ಮೋದಿ ಜತೆಗೆ 72 ಸಚಿವರು ಪ್ರಮಾಣ ವಚನ ಸ್ವೀಕಾರಿಸಿದ್ದಾರೆ. ಇದೀಗ ಮೋದಿ ಅವರು ಲೋಕಸಭೆಯಲ್ಲಿ ತಮ್ಮ ಸರ್ಕಾರ ಬಲವನ್ನು ಸಾಬೀತು ಮಾಡಲಿದ್ದಾರೆ.

ದೆಹಲಿ, ಜೂ.11: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂನ್ 20ಕ್ಕೆ ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ಮೋದಿ ನೇತೃತ್ವದಲ್ಲಿ ಎನ್ಡಿಎ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲಾಗಿದೆ. ಭಾನುವಾರದಂದು ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಿಸಿದ್ದಾರೆ. ಇದರ ಜತೆಗೆ 72 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನೆನ್ನೆ (ಜೂ.9) ರಂದು ಎಲ್ಲರಿಗೂ ಖಾತೆಯನ್ನು ಕೂಡ ನೀಡಿಲಾಗಿದೆ. ಇಂದು (ಜೂ.10) ಅನೇಕ ಸಚಿವರು ದೆಹಲಿ ಕಚೇರಿಗೆ ಬಂದು ಅಧಿಕೃತವಾಗಿ ಅಧಿಕಾರ ಸ್ವೀಕಾರಿಸಿದ್ದಾರೆ. ಇದರ ನಡುವೆ ಮೋದಿಗೆ ಬಹುಮತ ಸಬೀತು ಪಡಿಸುವ ಮತ್ತೊಂದು ಅಗ್ನಿ ಪರೀಕ್ಷೆ ಮುಂದಾಗಿದೆ.


