
ರಾಜೀನಾಮೆ ಸ್ವೀಕರಿಸಿದ ದ್ರೌಪದಿ ಮುರ್ಮು, ಮುಂದಿನ ಸರ್ಕಾರ ರಚನೆಯಾಗುವರೆಗೂ ಹಂಗಾಮಿ ಪ್ರಧಾನಿಗಳಾಗಿ ಮುಂದುವರಿಯುವಂತೆ ಸೂಚಿಸಿದ್ದಾರೆ. ನರೇಂದ್ರ ಮೋದಿಯವರ ಜೊತೆಯಲ್ಲಿ ಅವರ ಸಂಪುಟದ ಎಲ್ಲಾ ಸಚಿವರು ಸಹ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ನವದೆಹಲಿ: 17ನೇ ಲೋಕಸಭಾ ಅವಧಿ ಅಂತ್ಯವಾದ ಹಿನ್ನೆಲೆ ನರೇಂದ್ರ ಮೋದಿ (Narendra Modi) ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರನ್ನು ಭೇಟಿಯಾದ ನರೇಂದ್ರ ಮೋದಿ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ಸ್ವೀಕರಿಸಿದ ದ್ರೌಪದಿ ಮುರ್ಮು, ಮುಂದಿನ ಸರ್ಕಾರ ರಚನೆಯಾಗುವರೆಗೂ ಹಂಗಾಮಿ ಪ್ರಧಾನಿಗಳಾಗಿ ಮುಂದುವರಿಯುವಂತೆ ಸೂಚಿಸಿದ್ದಾರೆ. ನರೇಂದ್ರ ಮೋದಿಯವರ ಜೊತೆಯಲ್ಲಿ ಅವರ ಸಂಪುಟದ ಎಲ್ಲಾ ಸಚಿವರು ಸಹ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಇಂದು ಸಂಜೆ ದೆಹಲಿಯಲ್ಲಿ ಎನ್‌ಡಿಎ ನಾಯಕರ ಸಭೆ ನಡೆಯಲಿದೆ. ಸಭೆಗೆ ಅಮಿತ್ ಶಾ ಅವರೇ ಕರೆ ಮಾಡಿ ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ಸಭೆಯಲ್ಲಿ ನರೇಂದ್ರ ಮೋದಿ, ಜೆಪಿ ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿ ಮತ್ತು ಎನ್‌ಡಿಎ ಕೂಟ ಪ್ರಮುಖ ಗಣ್ಯರು ಭಾಗಿಯಾಗಲಿದ್ದಾರೆ.
