
ಮಂಗಳೂರು ಮೇ 2024 – ಮಂಗಳೂರು ಇನ್ಸ್ತಿಟ್ಯೂಟ್ ಆಫ್ ಆಂಕಾಲಜಿ (M.I.O) ಹಾಗೂ ಕೊಲೋಪ್ಲಾಸ್ಟ್ ಸಹಯೋಗದೊಂದಿಗೆ ಎಂ.ಐ. ಒ ಕರಂಗಲ್ಪಾಡಿ ಇಲ್ಲಿ ಕೊಲೊಸ್ಟಮಿ ಹಾಗೂ ಲಿಯೋಸ್ಟಮಿ ಕೇರ್ ಕ್ಲಿನಿಕ್ ಉದ್ಘಾಟನೆಗೊಂಡಿತು. ನವೀನ ರೀತಿಯ ಈ ಕ್ಲಿನಿಕ್ ಎಂ.ಐ. ಒ ದ ಖ್ಯಾತ ಕ್ಯಾನ್ಸರ್ ಶಸ್ತ್ರ ಚಿಕಿತ್ಸಕರಾದ ಡಾ.ಜಲಾಲುದ್ದೀನ ಆದರೆ ಅಕ್ಬರ್ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಈ ಬಗ್ಗೆ ಮತ್ತನಾಡಿದ ಡಾ.ಜಲಾಲುದ್ದೀನ್ ಅಕ್ಬರ್ ಕೊಲೊಸ್ಟಮಿ ಹಾಗೂ ಲಿಯೋಸ್ಟಮಿ ಬ್ಯಾಗ್ ಗಳ ಬಗ್ಗೆ ಜಾಗೃತಿ ಮೂಡಿಸಿ ಸಮಗ್ರ ಶಿಕ್ಷಣ ಒದಗಿಸುವ ಗುರಿಯನ್ನು ಹೊಂದಲಾಗಿದೆ. ರೋಗಿಗಳಿಗೆ ಸೌಲಭ್ಯವನ್ನು ಒದಗಿಸಿಕೊಡುವ ಜೊತೆಗೆ ಅದರ ಬಳಕೆಯ ಬಗ್ಗೆ ರೋಗಿಗಳಿಗೆ ಮತ್ತವರ ಆರೈಕೆದಾರರಿಗೆ ಜ್ಞಾನವನ್ನು ನೀಡಿ ಆಯಾ ಮೂಲಕ ಗುಣಮಟ್ಟದ ಹಾಗೂ ತ್ರಪ್ತಿ ದಾಯಕ
ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ.ಅಲ್ಲದೆ ಚಿಕಿತ್ಸಾಲಯವು ಶುಶ್ರೂಷಕರಿಗೆ ಅತ್ಯುನ್ನತ ಗುಣಮಟ್ಟದ ತರಬೇತಿ ನೀಡಲಿದೆ.

ಕೋಲೊಪ್ಲಾಸ್ಟ್ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಈ ಕ್ಲಿನಿಕ್ ರೋಗಿಗಳ ಆರೈಕೆಯ ಗುಣಮಟ್ಟವನ್ನು ಸುಧಾರಿತ ತಂತ್ರಾಂಶದ ಜೊತೆ ಶಿಕ್ಷಣ ,ಜಾಗೃತಿ ಹಾಗೂ ತರಬೇತಿ ನೀಡಲು ಮೀಸಲಾಗಿದೆ. ಕೋಲೋಸ್ಟಮಿ ಬ್ಯಾಗ್ ಹೊಂದಿರುವ ರೋಗಿಗಳು ಈ ಹಿಂದಿನಂತೆಯೇ ಸಾಮಾನ್ಯವಾಗಿ ಜೀವನ ನಡೆಸಬಹುದಾಗಿದೆ. ಬ್ಯಾಗ್ ಹೊಂದಿದವರು ತಮ್ಮ ಜೀವನವೇ ಮುಗಿಯಿತು ಎನ್ನುವ ಮನಸ್ಥಿತಿಯನ್ನು ಸಕಾರಾತ್ಮಕವಾಗಿ ಪರಿವರ್ತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರ ಜೀವನ ಪರಿಪೂರ್ಣ ಗೊಳಿಸುವುದಾಗಿದೆ ಎಂದರು.
ಈ ಕ್ಲಿನಿಕ್ ಕೊಲೊಸ್ಟಮಿಯೊಂದಿಗೆ ಜೀವನ ನಡೆಸುತ್ತಿರುವ ರೋಗಿಗಳಿಗೆ ಜೀವನದಲ್ಲಿ ಭರವಸೆ ಹಾಗೂ ಬೆಂಬಲವನ್ನು ನೀಡವಲ್ಲಿ ಮುಂದಡಿ ಇಡಲಿದೆ.

