

Published May 23, 2024 at 9:06am
Update May 23, 2024 at 9:08am
ಆರ್ಸಿಬಿ ತಂಡ ಎಲಿಮಿನೇಟ್ ಪಂದ್ಯದಲ್ಲಿ ಎಡವಿದೆ. ಅಹಮದಾಬಾದ್ ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ಗಳ ಸೋಲುಂಡು ತವರಿಗೆ ಮರಳಿದೆ. ಆದರೂ ಅಭಿಮಾನಿಗಳು ನೆಚ್ಚಿನ ತಂಡವನ್ನು ಹೊಗಳುತ್ತಿದ್ದಾರೆ. ತನ್ನ ಹೋರಾಟದ ಮೂಲಕ ಸಿಎಸ್ಕೆ ತಂಡವನ್ನು ಸೋಲಿಸಿ 4ನೇ ಸ್ಥಾನದಲ್ಲಿ ನಿಂತ ಆರ್ಸಿಬಿ ಸಾಧನೆಗೆ ಭೇಷ್ ಎನ್ನುತ್ತಿದ್ದಾರೆ.

ಅಂದಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಳುತ್ತಾ, ಬೀಳುತ್ತಾ ಪಾಯಿಂಟ್ ಟೇಬಲ್ನ ಕೊನೆಯಲ್ಲಿದ್ದ ತಂಡ ನೇರವಾಗಿ 4ನೇ ಸ್ಥಾನಕ್ಕೇರಿತು. ಸಿಎಸ್ಕೆ ತಂಡವನ್ನು ಮರಳಿ ಊರಿಗೆ ಕಳುಹಿಸಿದ ಆರ್ಸಿಬಿಯು ರಾಜಸ್ಥಾನ್ ತಂಡದ ವಿರುದ್ಧ ಸುಲಭ ಸೋಲು ಕಂಡಿತು. ಆದರೆ ಐಪಿಎಲ್ 2024ರ ಪಾಯಿಂಟ್ ಟೇಬಲ್ನಲ್ಲಿ 4ನೇ ಸ್ಥಾನಕ್ಕೆ ಹೋಗಿ ಎಲಿಮಿನೇಟ್ ಆದ ಆರ್ಸಿಬಿ ದೊಡ್ಡ ಮೊತ್ತವನ್ನೇ ಬಾಚಿಕೊಂಡಿದೆ.


ಹೌದು. 4ನೇ ಸ್ಥಾನದಲ್ಲಿ ಕಾಣಿಸಿಕೊಂಡು ಕೊನೆಗೆ ನಿನ್ನೆಯ ಪಂದ್ಯದಲ್ಲಿ ತವರು ಸೇರಿದ ಆರ್ಸಿಬಿ 6.5 ಕೋಟಿ ಮೊತ್ತವನ್ನು ಬಾಚಿಕೊಂಡಿದೆ. ಇನ್ನು ಇಂದಿನ ಪಂದ್ಯದಲ್ಲಿ ಸೋತ ತಂಡ, ಅಂದರೆ 3ನೇ ಸ್ಥಾನದಲ್ಲಿರುವ ತಂಡ 7 ಕೋಟಿ ಗೆಲ್ಲಲಿದೆ. ಇನ್ನು ಟ್ರೋಫಿ ಗೆದ್ದ ತಂಡವು 46 ಕೋಟಿಯನ್ನು ಬಹುಮಾನವಾಗಿ ಗೆಲ್ಲಲಿದೆ.
