
ಉಡುಪಿ: ಬ್ರಹ್ಮಾವರ – ಹೆಬ್ರಿ – ಸೀತಾನದಿ ಮುಖ್ಯ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಶಾಸಕ ಕೆ. ರಘುಪತಿ ಭಟ್ ಶಿಫಾರಸ್ಸಿನ ಮೇರೆಗೆ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ರೂ. 28 ಕೋಟಿ ಮಂಜೂರಾಗಿ ಕಾಮಗಾರಿ ಆರಂಭಗೊಂಡಿದೆ.
ರಸ್ತೆ ಹಾದು ಹೋಗುವ ಕುಂಜಾಲು ಪೇಟೆ ಬಳಿ ಇರುವ ಖಾಸಗಿ ಜಾಗದ ಮಾಲಕರಿಂದ ತಡೆ ಉಂಟಾಗಿದ್ದು, ಈ ಸಂಬಂಧ ಇಂದು ಶಾಸಕ ಕೆ. ರಘುಪತಿ ಭಟ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.