
ಸೋಷಿಯಲ್ ಮೀಡಿಯಾದಲ್ಲಿ ಯಾರು ಯಾವಾಗ ಬೇಕಾದ್ರೂ ಸಖತ್ ಫೇಮಸ್ ಆಗಬಹುದು. ಛತ್ತೀಸ್ಗಢದ ಬಿಜೆಪಿ ಶಾಸಕರು ಪ್ರೇಮಿಗಳನ್ನ ಕೆಣಕಲು ಹೋಗಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ. ಎಂಎಲ್ಎ ರಿಕೇಶ್ ಸಿಂಗ್ಗೆ ಪಾರ್ಕ್ನಲ್ಲಿದ್ದ ಪ್ರೇಮಿಗಳು ಕೊಟ್ಟ ಲವ್ಲಿ ಆನ್ಸರ್ಗೆ ನೆಟ್ಟಿಗರು ಶಾಕ್ ಆಗಿದ್ದಾರೆ.
ಛತ್ತೀಸ್ಗಢದ ಬಿಜೆಪಿ ಎಂಎಲ್ಎ ರಿಕೇಶ್ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿ ಲೈವ್ ವಿಡಿಯೋ ಮಾಡುತ್ತಾ ಪಾರ್ಕ್ಗಳಿಗೆ ಎಂಟ್ರಿ ಆಗಿದ್ದಾರೆ. ಪಾರ್ಕ್ನಲ್ಲಿ ಏಕಾಂತದಲ್ಲಿ ಮಾತನಾಡುತ್ತಿದ್ದ ಪ್ರೇಮಿಗಳನ್ನು ಮಾತನಾಡಿಸಿದ್ದಾರೆ. ನೀವು ಪಾರ್ಕ್ನಲ್ಲಿ ಯಾಕೆ ಕುಳಿತುಕೊಂಡಿದ್ದೀರಾ. ಮನೆಗೆ ಹೋಗಿ ಎಂದು ಲವ್ವರ್ಗಳಿಗೆ ಬುದ್ಧಿವಾದ ಹೇಳಿದ್ದಾರೆ.

ಶಾಸಕ ರಿಕೇಶ್ ಸಿಂಗ್ ಅವರ ಮಾತಿಗೆ ಪಾರ್ಕ್ನಲ್ಲಿ ಕುಳಿತಿದ್ದ ಯುವ ಜೋಡಿಗಳು ಖಡಕ್ ಉತ್ತರ ಕೊಟ್ಟಿದ್ದಾರೆ. ಕೆಲವರು ಮುಖ ತೋರಿಸಲು ಹಿಂಜರಿದು ಮಾತನಾಡಿದ್ದರೆ, ಹಲವರು ಲೈವ್ ವಿಡಿಯೋ ಮಾಡಬೇಡಿ ಎಂದು ಶಾಸಕರು ಹಾಗೂ ಅವರ ಬೆಂಬಲಿಗರನ್ನೇ ತಡೆದಿದ್ದಾರೆ.
ಪಬ್ಲಿಕ್ ಪಾರ್ಕ್ನಲ್ಲಿ ಪ್ರೇಮಿಗಳು ಕೂತು ಮಾತನಾಡೋದು ಬೇಡ. ನೀವೆಲ್ಲಾ ಮನೆಗೆ ಹೋಗಿ ಎಂದು ರಿಕೇಶ್ ಸಿಂಗ್ ಯುವಕ, ಯುವತಿಯರಿಗೆ ಹೇಳಿದ್ದಾರೆ. ಶಾಸಕರ ಪ್ರಶ್ನೆಗೆ ಉತ್ತರಿಸಿರುವ ಪ್ರೇಮಿಗಳು ನಾವು ಪಾರ್ಕ್ನಲ್ಲಿ ಕುಳಿತು ಮಾತನಾಡದೇ ಇನ್ನೆಲ್ಲಿಗೆ ಹೋಗಬೇಕು. OYO ರೂಮ್ ಬುಕ್ ಮಾಡಿಕೊಂಡಿ ಅಲ್ಲಿಗೆ ಹೋಗುತ್ತೇವೆ ಎಂದು ಉತ್ತರಿಸಿದ್ದಾರೆ. OYO ರೂಮ್ ಬುಕ್ ಮಾಡಿಕೊಟ್ಟರೆ ಪಾರ್ಕ್ ಬಿಟ್ಟು ಹೋಗುತ್ತೇವೆ ಎಂದು ಡಿಮ್ಯಾಂಡ್ ಮಾಡಿದ್ದಾರೆ.

ಪಾರ್ಕ್ನಲ್ಲಿ ಶಾಸಕ ರಿಕೇಶ್ ಸಿಂಗ್ ಪ್ರೇಮಿಗಳನ್ನ ಕೆಣಕಲು ಹೋಗಿ ಪುಲ್ ಮೊಯೆ, ಮೊಯೆ ಆಗಿದ್ದಾರೆ. ಪಾರ್ಕ್ನಲ್ಲಿದ್ದ ಪ್ರೇಮಿಗಳು OYO ರೂಮ್ ಕೇಳಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

