
ರಿಯಾದ್: ರೂಪಾಂತರಿತ ಕೋರೋನಾ ಹಿನ್ನೆಲೆಯಲ್ಲಿ ಅಂತಾರಾಷ್ಟಿಯ ವಿಮಾನ ಹಾರಾಟದ ಮೇಲೆ ನಿರ್ಬಂಧ ವಿಧಿಸಿದ್ದ ಸೌದಿ ಅರೇಬಿಯ ತನ್ನ ನಿರ್ಬಂಧವನ್ನು ಇಂದಿನಿಂದ ತೆರವುಗೊಳಿಸಿದೆ.
ರೂಪಾಂತರಿತ ಕೊರೋನಾ ಹಿನ್ನೆಲೆಯಲ್ಲಿ ಡಿಸೆಂಬರ್ 21ರಂದು ಸೌದಿ ಸರಕಾರವು ಅಂತಾರಾಷ್ಟಿಯ ವಿಮಾನ ಹಾರಾಟ ಸಹಿತ ಎಲ್ಲ ಅಂತಾರಾಷ್ಟಿಯ ಗಡಿಗಳಲ್ಲಿ ನಿರ್ಬಂಧ ವಿಧಿಸಿತ್ತು. ಒಂದು ವಾರದ ನಂತರ ಮತ್ತೆ ಈ ನಿರ್ಬಂಧವನ್ನು ಒಂದು ವಾರಗಳ ಕಾಲ ಮುಂದುವರಿಸಿತ್ತು. ಇದೀಗ ಇಂದಿನಿಂದ ಎಲ್ಲಾ ಅಂತಾರಾಷ್ಟಿಯ ವಿಮಾನ ಸೇವೆಗಳನ್ನು ಮರು ಆರಂಭಿಸಿದೆ.
ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮೊದಲಾದ ರೂಪಾಂತರಿದ ಕೊರೋನಾ ಪತ್ತೆಯಾದ ದೇಶಗಳಿಂದ ಸೌದಿ ಅರೇಬಿಯಾಕೆ ಆಗಮಿಸುವವರು, ರೂಪಾಂತರಿತ ಕೊರೋನಾ ಪತ್ತೆಯಾಗದ ದೇಶದಲ್ಲಿ 14 ದಿನಗಳ ಕ್ವಾರಂಟೈನ್ನನ್ನು ಮುಗಿಸಿ ಸೌದಿ ಅರೇಬಿಯಾಕೆ ಪ್ರವೇಶಿಸಬಹುದು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ. ಜೊತೆಗೆ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನೂ ಪ್ರಸ್ತುತಪಡಿಸಬೇಕಿದೆ.
ಇತರ ದೇಶಗಳಿಂದ ಆಗಮಿಸುವವರು 3ರಿಂದ 7 ದಿನಗಳ ಸ್ವಯಂ ಐಸೋಲೇಶನ್ಗೆ ಒಳಗಾಗಬೇಕಿದ್ದು, ಕೋವಿಡ್ ನೆಗೆಟಿವ್ ಪ್ರಮಾಣ ಪತ್ರದೊಂದಿದೆ ಸೌದಿ ಅರೇಬಿಯಾ ಪ್ರವೇಶಿಸಬಹುದು.