ಗುರುಪುರ ಗ್ರಾಮ ಪಂಚಾಯತ್ ನ 28 ಕ್ಷೇತ್ರಗಳಲ್ಲಿ 2 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 12, ಎಸ್.ಡಿ.ಪಿ.ಐ 09, ಬಿಜೆಪಿ 06, ಪಕ್ಷೇತರ 01, ಒಟ್ಟಿನಲ್ಲೆ ಯಾವುದೇ ಬೆಂಬಲಿತ ಪಕ್ಷಗಳಿಗೆ ಬಹುಮತ ದೊರಕದ ಕಾರಣ ಗುರುಪುರ ಪಂಚಾಯತ್ ಅತಂತ್ರ ಸ್ಥಿತಿಯಲ್ಲಿದೆ.
ಗುರುಪುರ ಪಂಚಾಯತ್ ಕಾಂಗ್ರೆಸ್ ನ ಭದ್ರ ಕೋಟೆಯಾಗಿದ್ದು, ಕಳೆದ ಬಾರಿ 23 ಸ್ಥಾನ ಹೊಂದಿದ್ದ ಕಾಂಗ್ರೆಸ್ ಈ ಬಾರಿ 12 ಕುಸಿದಿದ್ದು, ಚರಿತ್ರೆಯಲ್ಲಿಯೇ ಮೊದಲ ಬಾರಿ ಅಧಿಕಾರವನ್ನ ಕಳೆದುಕೊಂಡಿದೆ, ಕಳೆದ ಬಾರಿ ಶೂನ್ಯ ಹೊಂದಿದ್ದ ಎಸ್.ಡಿ.ಪಿ.ಐ ಈ ಬಾರಿ ಭರ್ಜರಿ 9 ಸ್ಥಾನಗಳನ್ನ ತನ್ನದಾಗಿಸಿಕೊಂಡಿದೆ, ಅದರಲ್ಲೂ ಅಡ್ಡೂರಿನಲ್ಲಿ ಸ್ಪರ್ಧೆಸಿದ 8 ರಲ್ಲಿ 07 ನ್ನ ತನ್ನದಾಗಿಸಿಕೊಂಡು ಕಾಂಗ್ರೆಸ್ ನ ಭಧ್ರಕೋಟೆಯನ್ನ ಚಿದ್ರಮಾಡಿದೆ. ಒಟ್ಟಿನಲ್ಲಿ ಈ ಬಾರಿ ಗುರುಪುರ ಗ್ರಾಮ ಪಂಚಾಯತ್ ನಲ್ಲಿ ಕೋಮುವಾದಿ ಪಕ್ಚ ಬಿಜೆಪಿಯನ್ನ ದೂರವಿಟ್ಟು ಅಧಿಕಾರ ನಡೆಸಲು ಎಸ್.ಡಿ.ಪಿ.ಐಯ ಪಾತ್ರ ನಿರ್ಣಾಯಕವಾಗಲಿದೆ.