
ಬೆಂಗಳೂರು: ನಗರತ್ ಪೇಟೆಯಲ್ಲಿ (Nagarathpete ) ಸೌಂಡ್ ಬಾಕ್ಸ್ (Hanuman Chalisa) ಹಾಕಿದ್ದಕ್ಕೆ ಹಲ್ಲೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ಹಲ್ಲೆಗೊಳಗೊಳಗಾದ ಮುಖೇಶ್ ವಿರುದ್ದವೇ ಎಫ್‌ಐಆರ್ (FIR) ದಾಖಲಾಗಿದೆ.

ಕೋರ್ಟ್ ನಿರ್ದೇಶನ ಮೇರೆಗೆ ಬಂಧನಕ್ಕೆ ಒಳಗಾದ ಸುಲೇಮಾನ್ ತಾಯಿ ನೀಡಿದ ದೂರಿನ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ (Halasuru Gate police Station) ಎಫ್‌ಐಆರ್ ದಾಲಾಗಿದೆ. ಐಪಿಸಿ ಸೆಕ್ಷನ್ 506(ಕ್ರಿಮಿನಲ್ ಬೆದರಿಕೆ), 504(ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 323(ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?
ರಂಜಾನ್ ಇದ್ದರೂ ಸೌಂಡ್ ಬಾಕ್ಸ್ಕಿ ನಲ್ಲಿ ಜೋರು ಸೌಂಡ್ ಹಾಕಿ ಮುಕೇಶ್ ಕಿರಿಕ್ ಮಾಡುತಿದ್ದ . ಮಾರ್ಚ್ 17 ರಂದು ಸುಲೇಮಾನ್ ಸೇರಿ ಸ್ನೇಹಿತರು ಮುಖೇಶ್‌ಗೆ ಪ್ರಶ್ನಿಸಿದ್ದರು. ಪವಿತ್ರ ರಂಜಾನ್ ಹಬ್ಬವಿದೆ, ಮೂರು ಸಾವಿರ ಮಂದಿ ಇದೇ ರಸ್ತೆಯಲ್ಲಿ ಪ್ರಾರ್ಥನೆಗೆ ಹೋಗುತ್ತಾರೆ. ಇಷ್ಟು ಸೌಂಡ್ ಇಟ್ಟು ಹಾಡುಗಳನ್ನು ಹಾಕುವುದು ಯಾಕೆ ಎಂದು ಕೇಳಿದ್ದರು
ಪ್ರಶ್ನೆ ಕೇಳಿದ್ದಕ್ಕೆ ನನ್ನ ಮಗನ ಮೇಲೆ ಮುಖೇಶ್ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸೌಂಡ್ ಜೋರು ಹಾಕಿ ಕಿರಿಕ್ ಮಾಡುತಿದ್ದ ಕೋಮುವಾದಿ ಮುಕೇಶ್ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಪ್ರತಿಭಟಿಸಿದ್ದರು.
