
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಲೋಕಸಭೆ ಚುನಾವಣೆ ಕಾವು ಜೋರಾಗ್ತಿದ್ದಂತೆ ಪ್ರಭಾವಿ ನಾಯಕರಿಗೂ ಡಿಮ್ಯಾಂಡ್ ಹೆಚ್ಚಾಗ್ತಿದೆ. ಪ್ರಚಾರದ ಅಖಾಡಕ್ಕೆ ಅತಿರಥ ಮಹಾರಥರನ್ನ ಇಳಿಸಿ ಮತಬೇಟೆಯಾಡಲು ಪಕ್ಷಗಳು ಅಲರ್ಟ್ ಆಗಿವೆ. ರಾಜ್ಯದ ಸಿಎಂ ಸಿದ್ದರಾಮಯ್ಯಗೆ ಹೊರ ರಾಜ್ಯಗಳಲ್ಲೂ ಡಿಮ್ಯಾಂಡ್ ಹೆಚ್ಚಾಗಿದ್ದು, ನಮ್ಮ ರಾಜ್ಯಕ್ಕೂ ಪ್ರಚಾರಕ್ಕೆ ಬನ್ನಿ ಅಂತ ಅಹ್ವಾನಗಳು ಬಂದಿವೆ.

ಸಿದ್ದರಾಮಯ್ಯ.. ರಾಜ್ಯಕಂಡ ಧೀಮಂತ ನಾಯಕ. ಅನ್ನರಾಮಯ್ಯ ಅಂತಲೇ ಬಡವರ ಮನದಾಳದಲ್ಲಿ ಸ್ಥಾನ ಪಡೆದಿರೋ ಈ ಟಗರಿಗೆ ಸರಿ ಸಾಟಿಯಾದ ಮತ್ತೋರ್ವ ನಾಯಕನಿಲ್ಲ. ಕಾವೇರಿ ಇಂದ ಗೋದಾವರಿವರೆಗೂ ಸಿದ್ದರಾಮಯ್ಯ ಎಂಬ ಹೆಸರು ಕೇಳಿದ್ರೆ ಹೌದು ಹುಲಿಯಾ.. ಅಂತ ತಲೆ ಬಾಗುವರಿದ್ದಾರೆ. ಹೀಗಾಗಿ ಲೋಕ ಸಭೆ ಚುನಾವಣೆಯಲ್ಲಿ ಅನ್ನರಾಮಯ್ಯರಿಗೆ ಅನ್ಯ ರಾಜ್ಯದಲ್ಲೂ ಫುಲ್ ಡಿಮ್ಯಾಂಡ್ ಹೆಚ್ಚಾಗಿದೆ.

ಮಹಾರಾಷ್ಟ್ರ, ಕೇರಳ, ತಮಿಳುನಾಡಲ್ಲಿ ಸಿಎಂಗೆ ಆಹ್ವಾನ
ರಾಜ್ಯದ ಸಿಎಂ ಸಿದ್ದರಾಮಯ್ಯರಿಗೆ ಲೋಕಸಭೆ ಅಖಾಡದಲ್ಲಿ ಭಾರೀ ಬೇಡಿಕೆ ಹೆಚ್ಚಾಗಿದೆ.. ಹಲವು ಜನಪ್ರಿಯ ಯೋಜನೆಗಳನ್ನ ಜಾರಿಗೆ ತಂದು ರಾಜ್ಯದಲ್ಲಿ ಮನೆಮಾತಾಗಿರೋ ಸಿದ್ದರಾಮಯ್ಯ ನಮ್ಮ ರಾಜ್ಯಕ್ಕೂ ಪ್ರಚಾರಕ್ಕೆ ಬರಬೇಕು ಅಂತ ಅನ್ಯ ರಾಜ್ಯದ ನಾಯಕರು ಡಿಮ್ಯಾಂಡ್ ಮಾಡಿದ್ದಾರೆ.

ಸಿದ್ದರಾಮಯ್ಯಗೆ ಭರ್ಜರಿ ಡಿಮ್ಯಾಂಡ್!
- ಹೊರ ರಾಜ್ಯಗಳಲ್ಲಿ ಪ್ರಚಾರಕ್ಕೆ ಸಿದ್ದರಾಮಯ್ಯಗೆ ಫುಲ್ ಡಿಮ್ಯಾಂಡ್
- ಮಹಾರಾಷ್ಟ್ರ, ಕೇರಳ, ತಮಿಳುನಾಡಿಗೆ ಪ್ರಚಾರಕ್ಕೆ ಸಿದ್ದುಗೆ ಆಹ್ವಾನ
- ಮಹಾರಾಷ್ಟ್ರದ 7-8 ಕಡೆ ಪ್ರಚಾರ ಮಾಡಲು ಸಿದ್ದರಾಮಯ್ಯಗೆ ಮನವಿ
- ಮಹಾರಾಷ್ಟ್ರ ಉಸ್ತುವಾರಿ ರಮೇಶ್ ಚೆನ್ನಿತ್ತಲರಿಂದ ಸಿದ್ದುಗೆ ಆಹ್ವಾನ
- ಒಂದು ದಿನದ ಮಟ್ಟಿಗೆ ಮಹಾರಾಷ್ಟ್ರದಲ್ಲಿ ಪ್ರಚಾರ ಕೈಗೊಳ್ಳಲು ಸಮ್ಮತಿ
- ರಾಹುಲ್ ಗಾಂಧಿ ಸ್ಪರ್ಧಿಸಿದ ಕ್ಷೇತ್ರದಲ್ಲೂ ಸಿದ್ದರಾಮಯ್ಯರಿಂದ ಪ್ರಚಾರ
- ಕೇರಳದ ವಯನಾಡು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ ಸಿದ್ದರಾಮಯ್ಯ
ಹಾಗಿದ್ರೆ ಕುರುನಾಡಿನ ಅನ್ನರಾಮಯ್ಯರಿಗೆ ಬೇರೆ ರಾಜ್ಯದಿಂದ ಡಿಮ್ಯಾಂಡ್ ಬರಲು ಕಾರಣವೇನು ಅಂತ ನೋಡೋದಾದ್ರೆ.

ಸಿದ್ದರಾಮಯ್ಯಗೆ ಬೇಡಿಕೆ ಯಾಕೆ?
- ಕಾರಣ 01- ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಸಕ್ಸಸ್
- ಕಾರಣ 02- ರಾಜ್ಯದ ‘ಗ್ಯಾರಂಟಿ’ಯೇ ಮಾದರಿಯಾಗಿಸಿ ತಂತ್ರ
- ಕಾರಣ 03- ಹಿಂದುಳಿದ ಮತಗಳ ಟಾರ್ಗೆಟ್ ಮಾಡೋ ಪ್ಲಾನ್
- ಕಾರಣ 04- ಅಹಿಂದ ಮತಗಳನ್ನು ಸೆಳೆಯೋದಕ್ಕೆ ಲೆಕ್ಕಾಚಾರ
ಸಿಎಂ ಸಿದ್ದರಾಮಯ್ಯ ಬೇರೆ ರಾಜ್ಯಗಳ ಪಾಲಿಗೆ ವಿಐಪಿ ಪ್ರಚಾರಕರಾಗ್ತಿರೋದು ರಾಜ್ಯ ಕಾಂಗ್ರೆಸ್ನ ಹಿರಿಮೆಯನ್ನ ಹೆಚ್ಚಿಸಿದೆ. ರಾಜ್ಯದ ಗ್ಯಾರಂಟಿ ಅಸ್ತ್ರವನ್ನೇ ಬಳಿಸಿ ಬೇರೆ ರಾಜ್ಯಗಳಲ್ಲಿ ವಿಜಯ ಲಕ್ಷ್ಮಿಯನ್ನ ಒಲಿಸಿಕೊಳ್ಳಲು ಕಾಂಗ್ರೆಸ್ ಕಾತುರವಾಗಿದೆ.

