
ಉಡುಪಿ: ಹೊಸ ವರ್ಷದ ಹೊತ್ತಿಗೇ ಶಾಲೆಗಳು ಪುನಾರಂಭಗೊಳ್ಳುತ್ತಿವೆ.
ಉಡುಪಿಯ ಹಲವೆಡೆ ಇಂದು ಬೆಳಿಗ್ಗೆ ಪ್ರೌಢಶಾಲೆ ವಿದ್ಯಾರ್ಥಿಗಳು
ಶಾಲೆಗಳಿಗೆ ತೆರಳುತ್ತಿರುವ ದೃಶ್ಯ ಕಂಡುಬಂತು.
ಸಾಮಾಜಿಕ ಅಂತರದ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಎಂಬ
ನಿಯಮ ಪಾಲಿಸಿ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ಶಾಲೆಗಳಿಗೆ ತೆರಳಿದರು.
ಕಾಪು ಸಮೀಪದ ಶಾಲೆಯೊಂದರ ಹೊರಗಡೆ ವಿದ್ಯಾರ್ಥಿಗಳು ಕೊರೊನಾ ಜಾಗೃತಿ ಯ
ಭಿತ್ತಿಪತ್ರ ಹಿಡಿದು ಜಾಗೃತಿ ಮೂಡಿಸಿದರು. ಜಿಲ್ಲೆಯ ಬೆರಳೆಣಿಕೆಯ ಶಾಲೆಗಳಲ್ಲಿ ಶಿಕ್ಷಕರಿಗೆ
ಕೊರೊನಾ ಇದ್ದ ಕಾರಣ ಅಲ್ಲಿ ಶಾಲೆ ಆರಂಭಗೊಂಡಿಲ್ಲ ಎಂಬ ವರ್ತಮಾನಗಳಿವೆ.
ಉಳಿದಂತೆ ಪ್ರೌಢಶಾಲೆ ವಿದ್ಯಾರ್ಥಿಗಳು ಶಾಲೆಗೆ ತೆರಳುವ ದೃಶ್ಯ ಅಲ್ಲಲ್ಲಿ ಕಂಡು ಬಂದಿದೆ