
ಮಂಗಳೂರು ಹೊರವಲಯ (Mangalore) ಮುಡಿಪುವಿನಲ್ಲಿ ರಸ್ತೆಯಲ್ಲಿ ಆಟೋ ಚಾಲಕರಿಗಾಗಿ ಈ ಇಫ್ತಾರ್ ಕೂಟ ಆಯೋಜನೆಗೊಂಡಿತ್ತು. ಇಫ್ತಾರ್ ಕೂಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಕುರಿತು ವ್ಯಾಪಕವಾಗಿ ಭಾರೀ ಪರ ಮತ್ತು ವಿರೋಧ ಚರ್ಚೆ ನಡೆದಿತ್ತು.

ಮಂಗಳೂರು, ಏಪ್ರಿಲ್ 1: ಪ್ರಸಕ್ತ ರಂಜಾನ್ (Ramzan) ಆಚರಣೆ ವೇಳೆ ಉಪವಾಸ ಪ್ರಯುಕ್ತ ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ (Iftar party) ವ್ಯವಸ್ಥೆ ಆಯೋಜಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಸಾರ್ವಜನಿಕ ರಸ್ತೆಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದ ಅಬೂಬಕರ್ ಸಿದ್ದಿಕಿಗೆ ಚುನಾವಣಾ ಆಯೋಗ ತುರ್ತು ನೋಟಿಸ್ ನೀಡಿದೆ.

ಮಂಗಳೂರು ಹೊರವಲಯ (Mangalore) ಮುಡಿಪುವಿನಲ್ಲಿ ಆಟೋ ಚಾಲಕರಿಗಾಗಿ ಈ ಇಫ್ತಾರ್ ಕೂಟ ಆಯೋಜನೆಗೊಂಡಿತ್ತು. ಇಫ್ತಾರ್ ಕೂಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಕುರಿತು ವ್ಯಾಪಕವಾಗಿ ಭಾರೀ ಪರ ಮತ್ತು ವಿರೋಧ ಚರ್ಚೆ ನಡೆದಿತ್ತು.

ಇದೀಗ ಇಫ್ತಾರ್ ಕೂಟದಲ್ಲಿ ರಸ್ತೆ ಬಂದ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಿದ್ದೀರಿ ಎಂದು ಚುನಾವಣಾ ಆಯೋಗದಿಂದ ಆಯೋಜಕರಿಗೆ ನೋಟಿಸ್ ನೀಡಲಾಗಿದೆ. ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯೂ ಮಾಡಲಾಗಿದೆ ಅಂತ ನೋಟಿಸ್ ನೀಡಲಾಗಿದೆ.
