
Assault Case: ಮಣಿಪಾಲದ ಸರಳಬೆಟ್ಟುವಿನ ಅಪಾರ್ಟ್‌ಮೆಂಟ್ ಘಟನೆ ನಡೆದಿದೆ. ವಿದ್ಯಾರ್ಥಿಯ ಮೇಲೆ ಸುಮಾರು 5-6 ಮಂದಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಉಡುಪಿ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಮೇಲೆ ಗುಂಪು ಹಲ್ಲೆ ಮಾಡಿರುವ ಘಟನೆ (Assault Case) ತಾಲೂಕಿನ ಮಣಿಪಾಲದ ಸರಳಬೆಟ್ಟುವಿನಲ್ಲಿ ನಡೆದಿದೆ. ವಿದ್ಯಾರ್ಥಿಯನ್ನು ಬೆನ್ನಟ್ಟಿ ಹೋಗಿರುವ ಪುಂಡರು, ಅಪಾರ್ಟ್‌ಮೆಂಟ್‌ಗೆ ನುಗ್ಗಿ ಯದ್ವಾತದ್ವಾ ಥಳಿಸಿದ್ದಾರೆ.

ಮಣಿಪಾಲದ ಎಂಐಟಿಯ ಬಿ.ಟೆಕ್ ವಿದ್ಯಾರ್ಥಿ ಅಭಿಷೇಕ್ (23) ಹಲ್ಲೆಗೊಳಗಾದವರು. ಮಣಿಪಾಲದ ಸರಳಬೆಟ್ಟುವಿನ ಅಪಾರ್ಟ್‌ಮೆಂಟ್ ಘಟನೆ ನಡೆದಿದೆ. ಆಟೋದಲ್ಲಿ ಬಂದಿದ್ದ ವಿದ್ಯಾರ್ಥಿಯನ್ನು ಬೆನ್ನಟ್ಟಿದ ಸುಮಾರು 5-6 ಮಂದಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತನ್ನ ರೂಮ್‌ನೊಳಗೆ ಹೋಗುವ ಮುನ್ನವೇ ಅಭಿಷೇಕ್ ಮೇಲೆ ದಾಳಿ ನಡೆಸಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

