
Congress Candidates List : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಬೆಂಗಳೂರು, ಮಾರ್ಚ್ 21: ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಕರ್ನಾಟಕ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ ಒಟ್ಟು 17 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಘೋಷಿಸಿದೆ.

ಕರ್ನಾಟಕದ 17 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
1. ಚಿಕ್ಕೋಡಿ (ಸಾಮಾನ್ಯ ಕ್ಷೇತ್ರ)
– ಪ್ರಿಯಾಂಕ ಜಾರಕಿಹೊಳಿ, ಸಚಿವ ಸತೀಶ್ ಜಾರಕಿಹೊಳಿ ಪುತ್ರಿ
– ಪರಿಶಿಷ್ಟ ಪಂಗಡ
2. ಬೆಳಗಾವಿ (ಸಾಮಾನ್ಯ ಕ್ಷೇತ್ರ)
– ಮೃಣಾಲ್ ಹೆಬ್ಬಾಳಕರ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ
– ವೀರಶೈವ ಲಿಂಗಾಯತ
3. ಬಾಗಲಕೋಟೆ (ಸಾಮಾನ್ಯ ಕ್ಷೇತ್ರ)
– ಸಂಯುಕ್ತ ಪಾಟೀಲ್, ಸಚಿವ ಶಿವಾನಂದ ಪಾಟೀಲ್ ಪುತ್ರಿ
– ವೀರಶೈವ ಲಿಂಗಾಯತ
4. ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು)
– ಡಾ. ರಾಧಾಕೃಷ್ಣ ದೊಡ್ಡಮನಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ
– ಪರಿಶಿಷ್ಟ ಜಾತಿ
5. ರಾಯಚೂರು (ಪರಿಶಿಷ್ಟ ಪಂಗಡ ಮೀಸಲು)
– ಕುಮಾರ್ ನಾಯ್ಕ್, ನಿವೃತ್ತ ಐಎಎಸ್
– ಪರಿಶಿಷ್ಟ ಜಾತಿ
6. ಬೀದರ್ (ಸಾಮಾನ್ಯ ಕ್ಷೇತ್ರ)
– ಸಾಗರ್ ಖಂಡ್ರೆ, ಸಚಿವ ಈಶ್ವರ್ ಖಂಡ್ರೆ ಪುತ್ರ
– ವೀರಶೈವ ಲಿಂಗಾಯತ
7.ಕೊಪ್ಪಳ (ಸಾಮಾನ್ಯ ಕ್ಷೇತ್ರ)
– ರಾಜಶೇಖರ್ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ
– ಕುರುಬ
8. ಧಾರವಾಡ (ಸಾಮಾನ್ಯ ಕ್ಷೇತ್ರ)
– ವಿನೋದ್ ಅಸೂಟಿ
– ಕುರುಬ
9. ದಾವಣಗೆರೆ (ಸಾಮಾನ್ಯ ಕ್ಷೇತ್ರ)
– ಪ್ರಭಾವತಿ ಮಲ್ಲಿಕಾರ್ಜುನ್, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ
– ವೀರಶೈವ ಲಿಂಗಾಯತ
10. ಉಡುಪಿ-ಚಿಕ್ಕಮಗಳೂರು (ಸಾಮಾನ್ಯ ಕ್ಷೇತ್ರ
– ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ
– ಬಂಟ್ಸ್
11. ದಕ್ಷಿಣ ಕನ್ನಡ (ಸಾಮಾನ್ಯ ಕ್ಷೇತ್ರ)
– ಪದ್ಮರಾಜ್, ವಕೀಲ
– ಬಿಲ್ಲವ
12. ಮೈಸೂರು-ಕೊಡಗು (ಸಾಮಾನ್ಯ ಕ್ಷೇತ್ರ)
– ಎಂ. ಲಕ್ಷ್ಮಣ್, ಕೆಪಿಸಿಸಿ ವಕ್ತಾರ
– ಒಕ್ಕಲಿಗ
13. ಬೆಂಗಳೂರು ಉತ್ತರ (ಸಾಮಾನ್ಯ ಕ್ಷೇತ್ರ)
– ಪ್ರೊ.ರಾಜೀವ್ ಗೌಡ, ಯೋಜನಾ ಆಯೋಗದ ಉಪಾಧ್ಯಕ್ಷ
– ಒಕ್ಕಲಿಗ
14. ಬೆಂಗಳೂರು ಕೇಂದ್ರ (ಸಾಮಾನ್ಯ)
– ಮನ್ಸೂರ್ ಖಾನ್, ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್ ಪುತ್ರ
– ಮುಸ್ಲಿಂ
15. ಬೆಂಗಳೂರು ದಕ್ಷಿಣ (ಸಾಮಾನ್ಯ)*
– ಸೌಮ್ಯ ರೆಡ್ಡಿ, ಸಚಿವ ರಾಮಲಿಂಗಾರೆಡ್ಡಿ ಪುತ್ರಿ
– ರೆಡ್ಡಿ
16. ಉತ್ತರ ಕನ್ನಡ (ಸಾಮಾನ್ಯ ಕ್ಷೇತ್ರ)
– ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕಿ
– ಮರಾಠ
17. ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)
– ಬಿಎನ್ ಚಂದ್ರಪ್ಪ, ಮಾಜಿ ಸಂಸದ
– ಪರಿಶಿಷ್ಟ ಜಾತಿ

ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ನ 2ನೇ ಪಟ್ಟಿ ಪ್ರಕಟವಾಗಿದ್ದು, 17 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದೆ. ನಿರೀಕ್ಷೆಯಂತೆಯೇ ಮಲ್ಲಿಕಾರ್ಜುನ್ ಖರ್ಗೆ ಈ ಬಾರಿ ಸ್ಪರ್ಧೆ ಮಾಡುತ್ತಿಲ್ಲ.
