
ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್ನಲ್ಲಿ ಸೊಸೆ ಹೊಡೆದಿರುವಂತಹ ಅಮಾನವೀಯ ಘಟನೆಯೊಂದು ನಗರದಲ್ಲಿ ನಡೆದಿದೆ. ಮಾರ್ಚ್ 9 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಉಮಾಶಂಕರಿ ಎಂಬುವವರಿಂದ ಕೃತ್ಯವೆಸಲಾಗಿದೆ. ಸಿಸಿಟಿವಿ ಆಧರಿಸಿ ಪತಿ ಠಾಣೆಗೆ ದೂರು ನೀಡಿದ್ದು, ಕಂಕನಾಡಿ ಪೊಲೀಸರಿಂದ ಉಮಾಶಂಕರಿ ಬಂಧನ ಮಾಡಲಾಗಿದೆ.

ಮಂಗಳೂರು, ಮಾರ್ಚ್ 11: ವೃದ್ಧ ಮಾವ ನಿಗೆ ವಾಕಿಂಗ್ ಸ್ಟಿಕ್ನಲ್ಲಿ ಸೊಸೆ ಹೊಡೆದಿರುವಂತಹ ಅಮಾನವೀಯ ಘಟನೆಯೊಂದು ನಗರದಲ್ಲಿ ನಡೆದಿದೆ. ಮಾರ್ಚ್ 9 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಉಮಾಶಂಕರಿ ಎಂಬುವವರಿಂದ ಕೃತ್ಯವೆಸಲಾಗಿದೆ. ಮಾವ ಪದ್ಮನಾಭ ಸುವರ್ಣ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ. ಪತಿ ವಿದೇಶದಲ್ಲಿದ್ದು ಮನೆಯಲ್ಲಿ ಮಾವ ಅತ್ತೆ ಮಾತ್ರ ಇದ್ದರು. ಸಿಸಿಟಿವಿ ಆಧರಿಸಿ ಪತಿ ಠಾಣೆಗೆ ದೂರು ನೀಡಿದ್ದು, ಕಂಕನಾಡಿ ಪೊಲೀಸರಿಂದ ಉಮಾಶಂಕರಿಯನ್ನು ಬಂಧಿಸಲಾಗಿದೆ.


ಮನೆಯಲ್ಲಿರುವ ಮಾವನಿಗೆ ಸೊಸೆ ವಾಕಿಂಗ್ ಸ್ಟಿಕ್‌ನಲ್ಲೇ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸೊಸೆ ಉಮಾಶಂಕರಿ ಅವರು ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿದ್ದಾರೆ.

ಅಮ್ಮ ನೋವು ಹೊಡಿಬೇಡ ಬಿಡಮ್ಮ.. ಮಂಗಳೂರಿನಲ್ಲಿ ಸೊಸೆಯೊಬ್ಬಳು ವೃದ್ಧ ಮಾವನಿಗೆ ಮನಸೋ ಇಚ್ಛೆಯಿಂದ ಥಳಿಸಿದ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ. ನಗರದ ಅತ್ತಾವರದ ಕೆಇಬಿಯಲ್ಲಿ ಅಧಿರಿಯಾಗಿರುವ ಸೊಸೆ ಉಮಾಶಂಕರಿ ಸ್ವಂತ ಮಾವನ ಮೇಲೆ ಹಲ್ಲೆ ಮಾಡಿದ್ದಾಳೆ.


ಕಳೆದ ಮಾರ್ಚ್ 9ರಂದು ಮಂಗಳೂರಿನ ಕುಲಶೇಖರದಲ್ಲಿ ಈ ಘಟನೆ ನಡೆದಿದೆ. ವೃದ್ಧನ ಮಗ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. 76 ವರ್ಷದ ವೃದ್ಧ ಮಾವನ ಜೊತೆ ಸೊಸೆ ಇದ್ದರು. ವಿದೇಶದಲ್ಲಿದ್ದ ಮಗ ಮನೆಗೆ ಬಂದು ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಸೊಸೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಗಾಯಾಳು ಮಾವ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

