
ಮಲಪುರಂ : ಅಲ್ ಬಿರ್ ವಿದ್ಯಾರ್ಥಿಗಳ ರಾಷ್ಟ್ರೀಯ ಮಟ್ಟದ ಕಿಡ್ಸ್ ಫೆಸ್ಟ್ ಮಲಪುರಂ ಜಿಲ್ಲೆ ಪೆರದಾಳ್ಮನ್ನಾ ದ
M E A ಇಂಜಿನಿಯರ್ ಕಾಲೇಜಿ ನಲ್ಲಿ ನಡೆಯಿತು. ಕರ್ನಾಟಕ ಸೇರಿದಂತೆ ಹಲವು ರಾಜ್ಯದ ವಿದ್ಯಾರ್ಥಿಗಳ ಮದ್ಯೆ ನಡೆದ ಸ್ಪರ್ಧೆ ಯ ಬೈತ್ ವಿಭಾಗ ದಲ್ಲಿ ಒಂಬತ್ತು ತಂಡಗಳ ಮದ್ಯೆನಡೆದ ಪ್ರಬಲ ಪೈಪೋಟಿಯಲ್ಲಿ ಗುರುಪುರ ಕೈಕಂಬ ದ ಅಲ್ ಬಿರ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು
ಈ ಫೆಸ್ಟ್ ನಲ್ಲಿ ಕರ್ನಾಟಕ ರಾಜ್ಯ ನಾಲ್ಕನೇ ಸ್ಥಾನ ತನ್ನದಾಗಿಸಿ ಕೊಂಡಿದೆ. ಕಾರ್ಯಕ್ರಮ ದಲ್ಲಿ ಕರ್ನಾಟಕ ಅಡ್ಡೂರು ಬದ್ರಿಯಾ ಆಲ್ಬರ್ ಸ್ಕೂಲ್, ಅಬ್ದುಲ್ ಜಬ್ಬಾರ್ ಉಸ್ತಾದ್ ಮೆಮೋರಿಯಲ್ ಸ್ಕೂಲ್ ಮೂಡಬಿದ್ರೆ, ಸಬೀಲ್ ಉಲ್ ಹುದಾ ಅಲ್ ಬಿರ್ ಕೈಕಂಬ ಸ್ಕೂಲ್ ಭಾಗವಹಿಸಿತು
ಕೈಕಂಬ ಅಲ್ ಬಿರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಮತ್ತು ಶಿಕ್ಷಕೀಯರ ಪ್ರೇರಣೆ ಗೆ ಸಂಸ್ಥೆ ಯ ಆಡಳಿತ ಸಮಿತಿ ಅಭಿನಂದನೆ ಸಲ್ಲಿಸಿದೆ.



