
ತುಮಕೂರು: ಪೋಕ್ಸೋ ಕೇಸ್ ಆರೋಪದಡಿ ಬಾಲಮಂಜುನಾಥ್ ಸ್ವಾಮಿ ಬಂಧನವಾಗಿದೆ. ಈ ಪ್ರಕರಣ ಸಂಬಂಧಿಸಿದಂತೆ ಕಾಮಿ ಸ್ವಾಮಿಯ ಮತ್ತೊಬ್ಬ ಶಿಷ್ಯನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮನೋಜ್ ಕುಮಾರ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದೂರು ನೀಡಿದ್ದ ಸಂತ್ರಸ್ತೆಗೆ ಕೇಸ್ ವಾಪಸ್ ಪಡೆಯುವಂತೆ ಬೆದರಿಕೆ ಆರೋಪದಡಿ ಈತನನ್ನು ಅರೆಸ್ಟ್ ಮಾಡಲಾಗಿದೆ.

ಲೈಂಕಿಗ ಕಿರುಕುಳ ನೀಡಿದ ಆರೋಪದಡಿ ಬಾಲಕಿಯೊಬ್ಬಳು ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷ ಬಾಲಮಂಜುನಾಥ್ ಸ್ವಾಮೀಜಿ ವಿರುದ್ಧ ದೂರು ನೀಡಿದ್ದಳು. ಸಂತ್ರಸ್ತ ಬಾಲಕಿ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಿಸಿದ್ದರು. ಈ ಆರೋಪದಡಿ ಬಾಲಮಂಜುನಾಥ್ ಸ್ವಾಮಿ ಹಾಗೂ ಸ್ವಾಮಿ ಯ ಆಪ್ತ ಸಹಾಯಕ ಅಭಿಲಾಷ್ನನನ್ನ ಪೊಲೀಸರು ಬಂಧಿಸಿ 5 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಅತ್ತ ಮನೋಜ್ ಕುಮಾರ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಗೆ ಹಾಗೂ ಸಂಬಂಧಿಕರಿಗೆ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಬೆದರಿಕೆ ಹಾಕಿದ್ದನು. ಪ್ರಕರಣದ ಸಾಕ್ಷಗಳನ್ನ ನಾಶಪಡಿಸಲು ಮುಂದಾಗಿದ್ದನು. ಇದೀಗ ಸಂತಸ್ತ್ರ ಬಾಲಕಿ ಮತ್ತು ಮನೆಯವರ ಆರೋಪದಡಿ ಮನೋಜ್ ಕುಮಾರ್ನನ್ನ ಹುಲಿಯೂರುರ್ದುಗ ಪೊಲೀಸರು ಬಂಧಿಸಿದ್ದಾರೆ.

ಮನೋಜ್ ಕುಮಾರ್ ಹಿನ್ನೆಲೆ ಏನು?
ಮನೋಜ್ ಕುಮಾರ್ ಕುಣಿಗಲ್ ಪಟ್ಟಣದಲ್ಲಿ ಮೊಬೈಲ್ ಶಾಪ್ ನಡೆಸುತ್ತಿದ್ದನು. ಸ್ವಾಮೀಜಿ ಪಟ್ಟ ಶಿಷ್ಯನಾಗಿ ಕೆಲಸ ಮಾಡುತ್ತಿದ್ದನು. ಸದ್ಯ ಮನೋಜ್ ಕುಮಾರ್ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣ ಸಂಬಂಧ ಹುಲಿಯೂರುದುರ್ಗ ಪೊಲೀಸರಿಂದ ತನಿಖೆ ಮುಂದುವರಿದಿದೆ.
