
ಬಿಹಾರ: ಇಬ್ಬರು ಪೈಲಟ್‌ಗಳಿದ್ದ ಸೇನಾ ವಿಮಾನ ಪತನವಾದ ಘಟನೆ ಬಿಹಾರದ ಗಯಾದಲ್ಲಿನ ಕಾಂಚನಪುರ ಗ್ರಾಮದಲ್ಲಿ ನಡೆದಿದೆ. ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ವಿಮಾನವು ತರಬೇತಿಯ ಮಾಡುವ ವೇಳೆ ಇದ್ದಕ್ಕಿದಂತೆ ಕೃಷಿ ಜಮೀನಿನಲ್ಲಿ ಬಿದ್ದು ಬಿಟ್ಟಿದೆ.
ಸೇನಾ ಲಘು ವಿಮಾನ ಪತನದಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ ಓರ್ವ ಮಹಿಳೆಗೆ ಸಣ್ಣಪುಟ್ಟ ಗಾಯವಾಗಿದೆ. ಕೂಡಲೇ ಗ್ರಾಮಸ್ಥರು ಪೈಲಟ್ಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ತಮ್ಮ ತೋಳ್ಬಲದಿಂದಲೇ ಹೊತ್ತು ಲಘು ವಿಮಾನವನ್ನ ಜಮೀನಿನಿಂದ ಹೊರತಂದಿರೋ ವಿಡಿಯೋ ಸಖತ್ ವೈರಲ್ ಆಗ್ತಿದೆ.
