
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಲ್ಲಿ ಬಿಜೆಪಿ ಖಾಸಗಿ ಲ್ಯಾಬ್ ವರದಿಯನ್ನು ಬಿಡುಗಡೆ ಮಾಡಿದೆ. ಖಾಸಗಿ ಲ್ಯಾಬ್ ವರದಿಯಲ್ಲಿ ಕಾಂಗ್ರೆಸ್ ನಾಯಕರ ಸಂಭ್ರಮಾಚರಣೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ದೃಢವಾಗಿದೆ ಎಂದು ಬಿಜೆಪಿ ಹೇಳಿದೆ. ಈ fake FSL ವರದಿ ಬಿಡುಗಡೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿದ್ದಾರೆ.

ಖಾಸಗಿ FAKE FSL ಲ್ಯಾಬ್ ವರದಿ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ನಾನೂ ಖಾಸಗಿ ಸಂಸ್ಥೆಗಳಿಗೆ ಕೊಟ್ಟು ರಿಪೋರ್ಟ್ ತೆಗೆದುಕೊಂಡಿದ್ದೇನೆ. ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬಹುದಲ್ವಾ. ನಾನು ಯಾವುದೋ ರಿಪೋರ್ಟ್ ತಂದು ಹೇಳಬಹುದಲ್ಲವಾ. ಬಿಜೆಪಿಯವರು ಮಾಡಿದ್ದು ನಿಜವಾದ ದೇಶದ್ರೋಹ. ಸಮಾಜದಲ್ಲಿ ಆತಂಕ ಇರಬೇಕು ಅಂತ ಅವರು ಯಾಕೆ ಬಯಸ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ FSL ರಿಪೋರ್ಟ್ಗಾಗಿ ಕಾಯುತ್ತಿದೆ. ಇದಕ್ಕೆ ಕಾರಣ ಯಾವುದೇ ಗೊಂದಲ ಇರಬಾರದು ಅಂತ. ಬಿಜೆಪಿಯವರು ಯಾವ ವಿಡಿಯೋವನ್ನು ಲ್ಯಾಬ್ಗೆ ಕೊಟ್ಟಿದ್ದಾರೋ ಗೊತ್ತಿಲ್ಲ. ಮೂರು ಫೂಟೇಜ್ ತೆಗೆದುಕೊಂಡಿದ್ದಾರೋ, ನೂರು ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಗೃಹ ಇಲಾಖೆ ಇದರ ಬಗ್ಗೆ ವರದಿ ಕೊಡಬೇಕೇ ಹೊರತು ಸಂವಾದ ಫೌಂಡೇಷನ್ ಅಲ್ಲ. ಬಿಜೆಪಿಯವರು ಜವಾಬ್ದಾರಿಯುತ ಪಕ್ಷವಾಗಿ ಸಂವಾದ ಹಾಕಿದ ತಾಳಕ್ಕೆ ಕುಣಿತಾರೆ ಇವರಿಗೆ ನಾಚಿಕೆ ಬೇಡ್ವಾ ಎಂದು ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ.
