
ವರದಿ :ಹಂಝ ಬಂಟ್ವಾಳ
ಭೀಕರ ಅಪಘಾತ ಯುವಕ ಮೃತ್ಯು
ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಲಾರಿಗೆ ದ್ವಿಚಕ್ರ ವಾಹನ ಗುದ್ದಿ ಯುವಕ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಬಿಸಿ ರೋಡು ಕೈಕಂಬ ಮಿತ್ತಬೈಲ್ ತರಕಾರಿ ಮಾರುಕಟ್ಟೆ ಬಳಿ ನಡೆದಿದೆ.ಮಂಗಳೂರು ಕಡೆಯಿಂದ ಬಿ. ಸಿ ರೋಡಿಗೆ ಹೋಗುತ್ತಿದ್ದ ಸ್ಕೊಟರ್ ಸವಾರನಿಗೆ ಮಿತ್ತಬೈಲ್ ತರಕಾರಿ ಮಾರುಕಟ್ಟೆ ಬಳಿ ಹಣ್ಣು ತುಂಬಿದ ಲಾರಿ ಒಮ್ಮೆಲೇ ಹೆದ್ದಾರಿಗೆ ಬಂದ ಕಾರಣ ಸ್ಕೂಟರ್ ಸವಾರ ಲಾರಿ ಅಡಿಗೆ ಬಿದ್ದು ಸ್ಥಳ ದಲ್ಲೇ ಮೃತ ಪಟ್ಟಿದ್ದಾರೆ.

ಮೃತ ಯುವಕ ಫರಂಗಿಪೇಟೆ ಸಮೀಪ ಆಶ್ರಫ್ ಎಂದು ತಿಳಿದು ಬಂದಿದೆ..
ಹೆದ್ದಾರಿ ಬದಿ ಯಲ್ಲಿ ಅಪಾಯಕಾರಿ ಪಾರ್ಕಿಂಗ್
ರಾಷ್ಟ್ರಿಯ ಹೆದ್ದಾರಿ ಬದಿಯಲ್ಲಿ ತರಕಾರಿ ಹಾಗೂ ಹಣ್ಣು ಹಂಪಲು ಮಾರುಕಟ್ಟೆ ಇರುವುದರಿಂದ ಬೃಹತ್ ಲಾರಿ ಗಳು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಲೋಡ್ ಖಾಲಿ ಮಾಡುವುದರಿಂದ ಅಪಾಯಕಾರಿ ಯಾಗಿದ್ದು, ಮುಂದೆ ನಡೆಯುವ ಅನಾಹುತ ವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೆಕಾಗಿದೆ

ಅಶ್ರಫ್ ಇಂದು ಮುಂಜಾನೆ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತ ಆಲಡ್ಕ ನಿವಾಸಿ ತನ್ವೀರ್ ಎಂಬವರನ್ನು ತನ್ನ ಸ್ಕೂಟರ್ ನಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿರುವ ಅಂಗಡಿಗೆ ಬಿಡಲು
ತೆರಳಿದ್ದರು. ಹಾಗೆ 5:30ರ ಸುಮಾರಿಗೆ ಕೈಕಂಬಕ್ಕೆ ತಲುಪಿದ ಇವರು ತನ್ವೀರ್ ರನ್ನು ಸ್ಕೂಟರ್ ನಿಂದ ಇಳಿಸಬೇಕು ಅನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಹಿಂದಿರುಗುತ್ತಿದ್ದ
ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಹಿಂಬದಿಗೆ ಚಲಿಸಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಆರೋಪಿದ್ದಾರೆ.
ಘಟನೆಯಿಂದ ಇಬ್ಬರಿಗೂ ಗಾಯಗಳಾಗಿದ್ದು, ಗಂಭೀರ ಗಾಯಗೊಂಡಿದ್ದ ಅಶ್ರಫ್ ರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದ ಪೊಲೀಸ್ ಮೂಲಗಳು ತಿಳಿಸಿವೆ.